Get Even More Visitors To Your Blog, Upgrade To A Business Listing >>

ಹೊಸ ರಿಕ್ಷಾಕ್ಕೆ ಕಂಪೆನಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ, ರಿಕ್ಷಾ ಚಾಲಕರಿಗೆ ಉಡುಪಿಯ ಬಜಾಜ್ ಪವನ್ ಮೋಟಾರ್ಸ್ ಮೋಸ

autoprote

autopro
ಹೊಸ ರಿಕ್ಷಾ ಖರೀದಿಸುವಾಗ ಉಡುಪಿಯ ಕರಾವಳಿ ಬೈಪಾಸ್ ಬಳಿ ಇರುವ ಬಜಾಜ್ ಪವನ್ ಮೋಟಾರ್ಸ್ ಸಂಸ್ಥೆ ಹೆಚ್ಚುವರಿ ಹಣವನ್ನು ಬಡ ರಿಕ್ಷಾ ಚಾಲಕರಿಂದ ವಸೂಲು ಮಾಡುತ್ತಿದ್ದು ಇದನ್ನು ವಿರೋಧಿಸಿ ಆಶ್ರಯದಾತ ಆಟೋ ಯೂನಿಯನ್ ವತಿಯಿಂದ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ಉಡುಪಿಯ ಸರ್ವೀಸ್ ನಿಲ್ಧಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿರುವ ಆಶ್ರಯದಾತ ಆಟೋ ಯೂನಿಯನ್ ಪವನ್ ಬಜಾಜ್ ಸಂಸ್ಥೆಯ ವಿರುದ್ಧ ಧಿಕ್ಕಾರ ಕೂಗಿದರು. ಪವನ್ ಮೋಟಾರ್ಸ್‌ನಲ್ಲಿ ರಿಕ್ಷಾ ಖರೀದಿಸುವಾಗ ಕೊಟೇಶನ್‌ನಲ್ಲಿ ಅತ್ಯಧಿಕ ಹಣವನ್ನು ನಮೂದಿಸಿ ಬಡ ರಿಕ್ಷಾಚಾಲಕರಿಗೆ ಮೋಸ ಮಾಡಲಾಗುತ್ತಿದೆ. ರಿಕ್ಷಾ ಖರೀದಿಸುವಾಗ ಕೊಟೇಶನ್‌ನಲ್ಲಿ ಸರಿಯಾದ ಬೆಲೆಯನ್ನು ನಮೂದು ಮಾಡಬೇಕು. ರಿಜಿಸ್ಟೇಶನ್ ಫೀಸ್, ಇನ್ಶುರೆನ್ಸ್, ರೋಡ್ ಟ್ಯಾಕ್ಸ್, ಎಫ಼್.ಎಫ಼್.ಎಂ ಹೀಗೆ ಕಂಪೆನಿಯ ನಿಗದಿಪಡಿಸಿದ ಬೆಲೆಯಲ್ಲೇ ನೀಡಬೇಕು ಆದ್ರೆ ಮಂಗಳೂರಿನಲ್ಲಿ ಕಡಿಮೆ ಇರುವಾಗ ಬೆಲೆ ಉಡುಪಿಯಲ್ಲಿ ಮಾತ್ರ ಹೆಚ್ಚು ಮಾಡಿ ರಿಕ್ಷಾ ಚಾಲಕರಿಗೆ ಸಂಸ್ಥೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಶ್ರಯದಾತ ಆಟೋ ಯೂನಿಯನ್ ಅಧ್ಯಕ್ಷ ರಮೆಶ್ ಶೆಟ್ಟಿ ಆರೋಪಿಸಿದರು. ಮಾತ್ರವಲ್ಲ ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸಂಸ್ಥೆಯ ವಿರುದ್ದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.



This post first appeared on V4news, please read the originial post: here

Share the post

ಹೊಸ ರಿಕ್ಷಾಕ್ಕೆ ಕಂಪೆನಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ, ರಿಕ್ಷಾ ಚಾಲಕರಿಗೆ ಉಡುಪಿಯ ಬಜಾಜ್ ಪವನ್ ಮೋಟಾರ್ಸ್ ಮೋಸ

×

Subscribe to V4news

Get updates delivered right to your inbox!

Thank you for your subscription

×