Get Even More Visitors To Your Blog, Upgrade To A Business Listing >>

ಕೋಟೇಶ್ವರದ ಕೊಡಿಹಬ್ಬಕ್ಕೆ ಮುನ್ನುಡಿ ಗಾಳಿಪಟ ಉತ್ಸವ, ಕಡಲಕಿನಾರೆಯಲ್ಲಿ ಗಾಳಿಪಟ ಹಾರಿಸಿ ಸಂಭ್ರಮ

kitekotes

kitebeach
ಕೋಟೇಶ್ವರದ ಕೊಡಿ ಹಬ್ಬದ ಸಂಭ್ರಮ ಒಂದೆಡೆ. ಕಡಲ ಕಿನಾರೆಯಲ್ಲಿ ವರ್ಣವರ್ಣದ ಗಾಳಿಪಟಗಳ ಚಿತ್ತಾರ ಮತ್ತೊಂದೆಡೆ. ವಿವಿಧ ಸಂಘಟನೆಗಳು ಆಯೋಜಿಸಿದ್ದ ಗಾಳಿಪಟ ಉತ್ಸವವು ನೂರಾರು ಜನರ ಮನರಂಜಿಸಿತು.

kiteko
ಅತ್ತ ಕೋಟೇಶ್ವರzಲ್ಲಿ ಕೋಟಿಲಿಂಗೇಶ್ವರನ ಕೊಡಿಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದರೆ ಕೋಟೇಶ್ವರದ ಕಡಲ ಕಿನಾರೆಯಲ್ಲಿ ಗಾಳಿಪಟಗಳು ನಭವನ್ನು ಮುಟ್ಟಿದ್ದವು. ಸೂರ್ಯ ಕಡಲ ಸೇರುವ ಹೊತ್ತಿನಲ್ಲಿ ನಭದೆಲ್ಲೆಡೆ ಗಾಳಿಪಟಗಳು ತಾನೇ ಈ ನಭದ ರಾಜ ಎಂಬಂತೆ ಸಾಮ್ರಾಜ್ಯ ಸ್ಥಾಪಿಸಿದ್ದವು. ಇದು ಕೋಟೇಶ್ವರದ ಕಿನಾರಾ ಬೀಚ್‌ನಲ್ಲಿ ನಡೆದ ಗಾಳಿಪಟ ಉತ್ಸವದ ದೃಶ್ಯಗಳು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗಾಳಿಪಟ ಅಭಿಮಾನಿಗಳು ಗಾಳಿಪಟ ಹಾರಿಸುವ ಮೂಲಕ ಸಂತೋಷ ಪಟ್ಟರು.
ಹನಿಕೋಂಬ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮ ನೂರಾರು ಮಂದಿ ಪ್ರವಾಸಿಗರ ಮನಸೆಳೆಯಿತು. ಕೆಲಸದ ಒತ್ತಡದ ನಡುವೆ ಬೇಸತ್ತ ಕುಂದಾಪ್ರದ ಜನಕ್ಕೆ ಗಾಳಿಪಟ ಉತ್ಸವವವು ಭರಪೂರ ಮನರಂಜನೆಯನ್ನು ಒದಗಿಸಿತು. ಈ ಕೈಟ್ ಫೆಸ್ಟಿವಲ್ ಅದ್ಬುತವಾಗಿ ಬಂದಿದೆ. ಆಕಾಶದಲ್ಲಿ ಗಾಳಿಪಟ ಹಾರಾಡುವುದನ್ನು ನೋಡುವಾಗ ಬಹಳ ಸಂತೋಷವಾಗುತ್ತದೆ ಎಂದು ಗಾಳಿಪಟ ಉತ್ಸವದಲ್ಲಿ ಭಾಗಿಯಾದವರು ಸಂತಸ ಹಂಚಿಕೊಂಡರು.
ಹನಿಕಾಂಬ್ ಸಂಸ್ಥೆ ಮೊದಲ ಬಾರಿ ಆಯೋಜಿಸಿದ್ದ ಈ ಕಾರ್ಯಕ್ರಮ ಬಹಳಷ್ಟು ಮಂದಿಯನ್ನು ಆಕರ್ಷಿಸಿದೆ. ಹಾಗಾಗಿ ತಿಂಗಳಿಗೊಮ್ಮೆಯಾದರೂ ರಜಾ ಸಮಯದಲ್ಲಿ ವಿವಿಧ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಎನ್ನುವ ಬಯಕೆ ಆಯೋಜಕರದ್ದು.



This post first appeared on V4news, please read the originial post: here

Share the post

ಕೋಟೇಶ್ವರದ ಕೊಡಿಹಬ್ಬಕ್ಕೆ ಮುನ್ನುಡಿ ಗಾಳಿಪಟ ಉತ್ಸವ, ಕಡಲಕಿನಾರೆಯಲ್ಲಿ ಗಾಳಿಪಟ ಹಾರಿಸಿ ಸಂಭ್ರಮ

×

Subscribe to V4news

Get updates delivered right to your inbox!

Thank you for your subscription

×