Get Even More Visitors To Your Blog, Upgrade To A Business Listing >>

ಯು‌ಎ‌ಇಯಲ್ಲಿ ಹಂಸನಾದ ಸಂಗೀತ ರಸಸಂಜೆ, ಸಂಗೀತದ ಕಡಲಲ್ಲಿ ತೇಲಾಡಿದ ಯು‌ಎ‌ಇ ಕನ್ನಡಿಗರು

dubaihamsa

dubaiham
ದುಬೈ ಮಾಲ್ ಆಫ್ ದಿ ಎಮಿರೇಟ್ಸ್‌ನ ಡಕ್‌ಟ್ಯಾಕ್ ಸೆಂಟರ್ ಪಾಯಿಂಟ್ ಥಿಯೇಟರ್‌ನಲ್ಲಿ ಹಂಸನಾದ ಸಂಗೀತ ಕಾರ್ಯಕ್ರಮ ನಡೆಯಿತು.

dubaiha
ದುಬೈ ಮಾಲ್ ಆಫ್ ದಿ ಎಮಿರೇಟ್ಸ್‌ನ ಡಕ್‌ಟ್ಯಾಕ್ ಸೆಂಟರ್ ಪಾಯಿಂಟ್ ಥಿಯೇಟರ್‌ನಲ್ಲಿ ಹಂಸನಾದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಶ್ರೀಮತಿ ಲತಾ ಹಂಸಲೇಖ ಸಭಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಆತ್ಮಿಯವಾಗಿ ಸ್ವಾಗತಿಸಿದರು. ಸತ್ಯಂ ಶಿವಂ ಸುಂದರಂ ಕನ್ನಡ ಎಂದು ಹೇಳಿ ತಮ್ಮ ಮಾತನ್ನು ಪ್ರಾರಂಭಿಸಿದ ಡಾ. ಹಂಸಲೇಖಾ, ನಾನು ಮಾಡಿದ ಪುಟ್ಟಪುಟ್ಟ ಹಾಡುಗಳು ಹೂವುಗಳಾಗಿ ಕಲಾವಿದರ ಬಾಯಲ್ಲಿ ನನ್ನ ಮತ್ತು ನನ್ನ ಹೆಂಡತಿಯ ಮೈಮೇಲೆ ಬೀಳುತ್ತಿವೆ. ಇದೊಂದು ರೋಮಾಂಚನದ ಕ್ಷಣ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಉದ್ಯಮಿ, ಡಾ. ಬಿ. ಆರ್. ಶೆಟ್ಟಿಯವರು ಡಾ. ಹಂಸಲೇಖರಿಗೆ ‘ದೇಸಿ ದೊರೆ’ ಬಿರುದು ನೀಡಿ ಗೌರವಿಸಿದರು. ಕಾರ್ಯಕ್ರಮದ ಸಂಘಟಕ ಶಿವಕುಮಾರ್ ಮತ್ತಿತರರು ಡಾ. ಹಂಸಲೇಖರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಚಿನ್ಮಯ್, ಮಾನಸ ಹೊಳ್ಳ, ದೀಪ ಸಂತೋಷ್, ಉದಯ್ ನಂಜಪ್ಪ, ಕುಮಾರಿ ಆದಿರಾ ಶಿವಕುಮಾರ್, ಜಮೀಲ್ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು. ಆಚಾರ್ಯ ಮೋಹನ್ ಕುಮಾರ್ ಹಾಗೂ ಶಿವಕುಮಾರ್‌ರ ಹಿಂದೂಸ್ತಾನಿ ರಾಗದ ಜುಗಲ್ ಬಂದಿ ಗಮನ ಸೆಳೆಯಿತು. ನೂರಾರು ಮಂದಿ ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತದ ಕಡಲಲ್ಲಿ ಮಿಂದೆದ್ದರು. (ರಮೇಶ್ ಸುವರ್ಣ, ಪ್ರಶಾಂತ್ ನಾಯರ್, ವಿ೪ನ್ಯೂಸ್ ಯು‌ಎ‌ಇ)This post first appeared on V4news, please read the originial post: here

Share the post

ಯು‌ಎ‌ಇಯಲ್ಲಿ ಹಂಸನಾದ ಸಂಗೀತ ರಸಸಂಜೆ, ಸಂಗೀತದ ಕಡಲಲ್ಲಿ ತೇಲಾಡಿದ ಯು‌ಎ‌ಇ ಕನ್ನಡಿಗರು

×

Subscribe to V4news

Get updates delivered right to your inbox!

Thank you for your subscription

×