Get Even More Visitors To Your Blog, Upgrade To A Business Listing >>

ಕಾಯಿಲೆಗಳ ಗೂಡಾಗುತ್ತಿರುವ ಭಟ್ಕಳ, ಜಾಣ ಕುರುಡು ಪ್ರದರ್ಶಿಸುತ್ತಿರುವ ಪುರಸಭೆ

Tags: agravesup

ccc_fotor

cxv_fotor
ಭಟ್ಕಳ ತಾಲೂಕು ಸದ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ, ಇನ್ನೊಂದು ಕಡೆ ಸಮಸ್ಯೆಯ ರಾಶಿ ಕಣ್ಣಮುಂದೆ ಇದ್ದರೂ ಸುಮ್ಮನಿದೆ ಭಟ್ಕಳ ಪುರಸಭೆ. ಭಟ್ಕಳ ಪುರಸಭೆ ವ್ಯಾಪ್ತಿಗೆ ಬರುವ ಸಾಗರ ರಸ್ತೆಯ ಮಾರ್ಗದಲ್ಲಿನ ಟೆಂಪೋ ಲಾರಿಗಳ ನಿಲ್ದಾಣ ಹಾಗೂ ಗೂಡಂಗಡಿಯ ಹಿಂಬದಿಯಲ್ಲಿ ಹಾದು ಹೋಗಿರುವ ಚರಂಡಿಯ ಸ್ಥಿತಿ ನೋಡ ತೀರದು.

xcdf_fotor
ತೆರೆದ ಈ ಚರಂಡಿಯ ಗಬ್ಬು ನಾರುವಿಕೆ ವಾಸನೆಯ ಜೊತೆಗೆ ಸಂಪೂರ್ಣ ರೋಗರುಜಿನಗಳ ತಾಣವಾಗಿದೆ. ಈ ಬಗ್ಗೆ ಪುರಸಭೆ ಮಾತ್ರ ಜಾಣತನದ ಕುರುಡು ಪ್ರದರ್ಶಿಸುತ್ತಿದೆ. ಸದ್ಯ ಭಟ್ಕಳದಲ್ಲೆಡೆ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಜನರಿಗೆ ಅಭಿವೃದ್ಧಿಯ ಅನುಭವ ಕಾಣ ಸಿಗುತ್ತಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಒಂದು ವರ್ಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಬಂದರೆ ಇನ್ನೊಂದು ವರ್ಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣ ಮುಂದಿನ ಸಮಸ್ಯೆಯನ್ನು ಜನರು ಬಂದು ಮನವಿ ಮಾಡಿಕೊಂಡರು ಯಾವುದೇ ಕಾರ್ಯವನ್ನು ಮಾಡದೇ ಉಲ್ಟಾ ಮಲಗಿದ್ದಾರೆ.
ಸಾಗರ ರಸ್ತೆಯ ಮಾರ್ಗದಲ್ಲಿನ ಟೆಂಪೋ ಲಾರಿಗಳ ನಿಲ್ದಾಣ ಹಾಗೂ ಗೂಡಂಗಡಿಕಾರರ ಅಂಗಡಿಯ ಹಿಂಬದಿಯ ಚರಂಡಿಯ ಸ್ಥಿತಿಯ ಬಗ್ಗೆ ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ಹಾಗೂ ಖಾಸಗಿ ವಾಹಿನಿಯಲ್ಲಿ ವರದಿ ಮಾಡಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರೂ ಸಹ ಚರಂಡಿಯ ದುಸ್ಥಿತಿಯನ್ನು ಸರಿಪಡಿಸುವ ಕೆಲಸಕ್ಕೆ ಮಾತ್ರ ಹೋಗಿಲ್ಲ. ಇಲ್ಲಿನ ಟೆಂಪೋ ಲಾರಿ ಚಾಲಕರು, ಹೊಟ್ಟೆ ಪಾಡಿಗಾಗಿ ಗೂಡಂಗಡಿಯನ್ನು ನಡೆಸುತ್ತಿರುವ ಜನರಿಗೆ ಗಬ್ಬು ನಾರುತ್ತಿರುವ ಈ ಚರಂಡಿಯ ವಾಸನೆಯನ್ನು ಪಡೆದುಕೊಳ್ಳುವ ದುರ್ಗತಿ ಎದುರಾಗಿದೆ. ಅಲ್ಲಿನ ವ್ಯಾಪಾರಸ್ಥರಿಂದ ಪಾದಚಾರಿಗಳವರೆಗೂ ತೆರೆದ ಚರಂಡಿ ಕಿರಿಕಿರಿ ಉಂಟು ಮಾಡುತ್ತಿದೆ. ಸದ್ಯ ಈ ಚರಂಡಿ ಮಳೆ ನೀರಿನ ಬದಲು ಕಸದಿಂದಲೇ ತುಂಬಿಕೊಂಡಿವೆ. ಪ್ಲಾಸ್ಟಿಕ್ ನಿಂದ ಹಿಡಿದು ಅಕ್ಕಪಕ್ಕದ ಮನೆಯವರು ಹಾಕುವ ಕೊಳೆತ ಆಹಾರ ಪದಾರ್ಥಗಳಿಂದ ಹಾಗು ಅಲ್ಲಿನ ಸ್ಥಳಿಯರ ಮಲ ವಿಸರ್ಜನೆಯಿಂದ ಪಾದಚಾರಿಗಳಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಅಂಗಡಿಕಾರರಿಗೆ ಮೂಗು ಮುಚ್ಚಿ ನಿಲ್ಲುವ ಸ್ಥಿತಿ ಉಂಟಾಗಿದೆ.
ತಾಲೂಕಿನಲ್ಲಿ ಈಗಾಗಲೇ ಡೆಂಗ್ಯೂ ಚಿಕನ್ಗುನ್ಯಾದಂತಹ ಮಾರಣಾಂತಿಕ ರೋಗಗಳು ಪ್ರಾರಂಭವಾಗಿದ್ದು, ಈ ರೀತಿ ತೆರೆದ ಚರಂಡಿಯಿಂದ ಮಾರಣಾಂತಿಕ ರೋಗ ಬಾರದೇ ಇನ್ನೇನು ಆಗುತ್ತದೆ. ಸದ್ಯ ಭಟ್ಕಳ ಪುರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಜನಪ್ರತಿನಿಧಿಗಳ ಕೆಲಸ ಮಾಡದೇ ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಸರಿಯಾದ ಶೌಚಾಲಯ ಇಲ್ಲದಿರುವ ಕಾರಣ ಇಲ್ಲಿನ ಸಾರ್ವಜನಿಕರು ಈ ಚರಂಡಿಯನ್ನು ಮೂತ್ರ ವಿಸರ್ಜನೆಯ ಅಡ್ಡವಾಗಿ ಬಳಸುತ್ತಿದ್ದಾರೆ. ಇವೆಲ್ಲದರ ಕಾರಣ ಮುಖ್ಯ ನಗರ ಪ್ರದೇಶದ ಚಿತ್ರಣ ಬದಲಾಗುತ್ತಿದೆ. ಈ ಬಗ್ಗೆ ಮಂಗಳವಾರದಂದು ಜಿ.ಪಂ. ಸದಸ್ಯ ಅಲ್ಬರ್ಟ ಡಿಕೋಸ್ತಾ ಹಾಗೂ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ ಸ್ಥಳ ಪರಿಶೀಲನೆಗೆ ಬಂದಾಗ ಇಲ್ಲಿನ ಸ್ಥಿತಿಯನ್ನು ಕಂಡು ದಿಗ್ಭ್ರಾಂತರಾದರು.
ಈ ಬಗ್ಗೆ ಜಿ.ಪಂ. ಸದಸ್ಯ ಅಲ್ಬರ್ಟ ಡಿಕೋಸ್ತಾ ಮಾತನಾಡಿದ್ದು, ಈ ಅವ್ಯವಸ್ಥೆಯನ್ನು ನೋಡಿದರೆ ಪುರಸಭೆಯ ಬೇಜವಾಬ್ದಾರಿ ಕಾಣುತ್ತದೆ. ಜನರ ಆರೋಗ್ಯದ ಕಾರ್ಯಕ್ರಮ ಎಲ್ಲಿ ಸಮಸ್ಯೆಯಾಗುತ್ತಿದೆ ಹಾಗೂ ಪುರಸಭಾ ವ್ಯಾಪ್ತಿಯ ಚರಂಡಿಯ ಪರಿಶೀಲನೆ ಮಾಡದ ಕೇವಲ ಕಛೇರಿಯ ಕೆಲಸ ಮಾಡುವುದಲ್ಲ. ಪತ್ರಿನಿತ್ಯ ೨,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ತಿರುಗಾಡುವ ಮಾರ್ಗವಾಗಿದ್ದು, ಪುರಸಭೆ ಯಾಕೆ ಈ ರೀತಿಯ ನೀಚ ಕಾರ್ಯ ಮಾಡುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಜನರಿಂದ ಸರಿಯಾದ ಸಮಯಕ್ಕೆ ಸರಿಯಾದ ಮೊತ್ತದ ತೆರಿಗೆಯನ್ನು ಪಾವತಿಸಿಕೊಳ್ಳುವ ಪುರಸಭೆ ಅಭಿವೃದ್ಧಿ ಕಾರ್ಯಕ್ಕಿಂತ ಸಮಸ್ಯೆಗೆ ಸಮಸ್ಯೆಯನ್ನೇ ಹೆಚ್ಚು ಮಾಡುತ್ತಿದೆ. ಆದಷ್ಟು ಬೇಗ ಈ ಚರಂಡಿಯ ಸ್ಥಿತಿಯನ್ನು ಬದಲಾಯಿಸಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂಬ ಎಚ್ಚರಿಕೆಯ ಮಾತುಗಳನ್ನು ಆಡಿದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ ಚರಂಡಿಯ ದುಸ್ಥಿತಿಯನ್ನು ಗಮನಿಸಿ ನಮ್ಮ ವಾಹಿನಿಯ ಜೊತೆ ಮಾತನಾಡಿದ್ದು, ನಗರದ ಹೃದಯ ಭಾಗವೇ ಈ ರೀತಿ ಶುಚಿತ್ವವನ್ನೇ ಕಳೆದುಕೊಂಡರೆ ಇನ್ನು ಉಳಿದ ಭಾಗದ ಸ್ಥಿತಿ ಹೇಗಿರಬೇಕು. ಪ್ರತಿದಿನದ ಲೆಕ್ಕದಂತೆ ಪುರಸಭೆಯ ಗಮನಕ್ಕೆ ಈ ಚರಂಡಿಯ ಅಶುಚಿಯ ಹಾಗೂ ಗಬ್ಬು ನಾರುತ್ತಿರುವ ಬಗ್ಗೆ ತಿಳಿಸಿ ಸಹ ಯಾವುದೇ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂದರೆ ಪುರಸಭೆಯ ಅಸ್ಥಿತ್ವ ಇದೆಯಾ ಇಲ್ಲವ ಎನ್ನುವುದು ಗಮನಿಸಬೇಕಾಗಿದೆ.This post first appeared on V4news, please read the originial post: here

Share the post

ಕಾಯಿಲೆಗಳ ಗೂಡಾಗುತ್ತಿರುವ ಭಟ್ಕಳ, ಜಾಣ ಕುರುಡು ಪ್ರದರ್ಶಿಸುತ್ತಿರುವ ಪುರಸಭೆ

×

Subscribe to V4news

Get updates delivered right to your inbox!

Thank you for your subscription

×