Get Even More Visitors To Your Blog, Upgrade To A Business Listing >>

ಮಂಗಳೂರು: ಪ್ರಧಾನಿ ನೋಟ್ ಬ್ಯಾನ್ ಹಿನ್ನಲೆ : ಸಹಕಾರ ರಂಗದಲ್ಲಿ ಭಾರೀ ಆತಂಕ

hqdefault-copy

ಮಂಗಳೂರು: ಸಹಕಾರಿ ಚಳವಳಿಯಲ್ಲಿ ಒಂದು ಕಾಲಕ್ಕೆ ಭಾರೀ ಜನಪ್ರಿಯತೆ ಹಾಗೂ ಯಶಸ್ಸು ಗಳಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಆತಂಕ ಸೃಷ್ಟಿ ಯಾಗಿದೆ. ಸಹಕಾರ ರಂಗದ ಯಶಸ್ವಿ ಪ್ರಯೋಗಶಾಲೆ ಯಲ್ಲೇ ಆತಂಕ ಏಳಲು ಕಾರಣವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ಧತಿ ಆದೇಶ.
ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾಡಲು ಕೆಲವರು ಸಹಕಾರಿ ಬ್ಯಾಂಕ್ ಅನ್ನು ಉಪಯೋಗಿಸು ತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ವಹಿವಾಟುಗಳನ್ನು ನಿರ್ಬಂಧಿಸಲಾಗಿತ್ತು. ಮಾತ್ರವಲ್ಲ ಜಿಲ್ಲೆಯ ಕೆಲ ಸಹಕಾರಿ ಬ್ಯಾಂಕುಗಳಿಗೆ ಆದಾಯ ಇಲಾಖೆ ದಾಳಿ ಮಾಡಿತ್ತು. ಸದ್ಯಕ್ಕೆ ತಟಸ್ಥವಾ ದಂತಿರುವ ಸಹಕಾರಿ ಬ್ಯಾಂಕುಗಳು ಮುಂದೇನು ಎಂಬ ಚಿಂತೆಯಲ್ಲಿದೆ. ಸಹಕಾರಿ ಬ್ಯಾಂಕುಗಳಲ್ಲಿ ಕೋಟ್ಯಂತರ ರುಪಾಯಿ ಬಂಡವಾಳ ಇರುವುದರಿಂದ ಅಲ್ಲೀಗ ಬಂಡವಾಳ ಇಟ್ಟವರಂತೂ ನೆಮ್ಮದಿ ಕಳೆದುಕೊಂಡಿದ್ದಾರೆ. ಏನೂ ಮಾಡಿದರೂ ಮುಂದಿನ ದಿನಗಳಲ್ಲಿ ಠೇವಣಿ ವಾಪಾಸು ಪಡೆಯುವುದು ಸುಲಭವಲ್ಲ. ಸಹಕಾರಿ ಬ್ಯಾಂಕುಗಳು ಅಷ್ಟೊಂದು ದೊಡ್ಡ ಮೊತ್ತವನ್ನು ಹಾರ್ಡ್ ಕ್ಯಾಶ್ ಆಗಿ ಕೊಡುವುದಿಲ್ಲ. ಚೆಕ್ ಮುಖಾಂತರ ಕೊಡುವುದಿದ್ದರೂ ಬ್ಯಾಂಕ್ ಮೂಲಕವೇ ಬರಬೇಕು. ಆಗ ಹಣದ ಮೂಲದ ಬಗ್ಗೆ ಯಾಬಿಡಲೇ ಬೇಕಾಗುತ್ತದೆ ಎಂಬ ಚಿಂತೆ ಠೇವಣೆದಾರರದ್ದು.
ಮಂಗಳೂರಿನಲ್ಲಂತೂ ಸಹಕಾರಿ ಬ್ಯಾಂಕುಗಳು ಹಲವು ಇದೆ. ಕೆಲ ಉದ್ಯಮಿಗಳ ಹಿತಾಸಕ್ತಿ ಕಾಯಲೆಂದೇ ಸ್ಥಾಪನೆಯಾದವುಗಳಿವೆ. ವ್ಯವಹಾರದ ಗಳಿಕೆಯನ್ನು ಸಹಕಾರಿ ಬ್ಯಾಂಕುಗಳಲ್ಲಿ ತೊಡಗಿಸಿ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾಡಲೆಂದೇ ಕೆಲ ಸಹಕಾರಿ ಬ್ಯಾಂಕು ಸ್ಥಾಪನೆಯಾಗಿದೆ ಎನ್ನುವ ಅಂಶವನ್ನು ಆದಾಯ ತೆರಿಗೆ ಇಲಾಖೆಯ ಮಂದಿ ಪತ್ತೆ ಹಚ್ಚಿದ್ದಾರೆ. ಇವೆಲ್ಲವೂ ಕಪ್ಪುಹಣ ಇದ್ದವರ ಸಮಸ್ಯೆ. ಇನ್ನೂ ಕೆಲವರಿದ್ದಾರೆ, ಸಹಕಾರಿ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಠೇವಣೆಯಿಟ್ಟವರು. ಅವರ ಗತಿ ಏನು? ಕೋ‌ಅಪರೇಟಿವ್ ಸೊಸೈಟಿಯಲ್ಲಿಟ್ಟ ಹಣ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಇವರೂ ಇದ್ದಾರೆ. ಇವರೇನು ಕಪ್ಪು ಹಣದ ಕುಳಗಳಲ್ಲ. ಸೊಸೈಟಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ಠೇವಣೆ ಇಟ್ಟರೆ ಸಿಗುತ್ತದ ಎಂಬ ಕಾರಣಕ್ಕೆ ಇಟ್ಟವರು. ಸದ್ಯಕ್ಕೆ ಇವರೂ ತೊಂದರೆಗೆ ಒಳಗಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲೇ ಸಾವಿರಾರು ಕೋಟಿ ಸಹಕಾರಿ ಬ್ಯಾಂಕುಗಳಲ್ಲಿ ಠೇವಣೆ ರೂಪದಲ್ಲಿದೆ ಎಂಬ ಮಾತಿದೆ. ರಬ್ಬರ್ ಸೊಸೈಟಿಗಳಲ್ಲಂತೂ ದೊಡ್ಡ ಮೊತ್ತದ ಠೇವಣೆಗಳಿವೆ. ಜಿಲ್ಲೆಯನ್ನು ಬಿಟ್ಟು ನೋಡುವುದಾದರೆ ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಯ ಸಹಕಾರಿ ಬ್ಯಾಂಕುಗಳಲ್ಲಿ ಭದ್ರತಾ ಠೇವಣೆಯ ಮೊತ್ತ ಊಹನೆಗೆ ನಿಲುಕದ್ದು. ಪ್ರತಿಯೊಂದು ರಾಜಕೀಯ ಪಕ್ಷಗಳೂ ಸಹಕಾರಿ ಬ್ಯಾಂಕುಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿರುವುದರಿಂದ ಇಂಥ ಕಡೆ ಕಪ್ಪು ಹಣವೂ ಸಾಕಷ್ಟು ಪ್ರಮಾಣದಲ್ಲಿ ಜಮೆಯಾಗಿದೆ. ನೋಟ್‌ಬ್ಯಾನ್ ರದ್ಧತಿಯಿಂದಾಗಿ ಕೋಟ್ಯಂತರ ರುಪಾಯಿ ಸಹಕಾರಿ ಬ್ಯಾಂಕುಗಳಲ್ಲಿ ತಟಸ್ಥವಾಗಿ ಉಳಿದಿದೆ.
ಕೇರಳದಲ್ಲಂತೂ ಈ ಸಮಸ್ಯೆ ತಾರಕಕ್ಕೇರಿ ಬಂದ್ ಕೂಡಾ ನಡೆದಿದೆ. ಆದರೂ ಪರಿಹಾರ ಸಿಕ್ಕಿಲ್ಲ. ಇದ್ದಿದ್ದರಲ್ಲಿ ಕರ್ನಾಟಕದ ಸಹಕಾರಿ ಸಂಸ್ಥೆಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿ.13ರಂದು ಸಭೆ ಕರೆಯಲಾಗಿದೆ. ಕರ್ನಾಟಕ ಈ ಬಗ್ಗೆ ಪ್ರಧಾನಿ ಮೋದಿಯವರಲ್ಲಿಗೆ ನಿಯೋಗ ಕರೆದುಕೊಂಡು ಹೋಗುವ ಸಾಧ್ಯತೆಯೂ ಇದೆ.This post first appeared on V4news, please read the originial post: here

Share the post

ಮಂಗಳೂರು: ಪ್ರಧಾನಿ ನೋಟ್ ಬ್ಯಾನ್ ಹಿನ್ನಲೆ : ಸಹಕಾರ ರಂಗದಲ್ಲಿ ಭಾರೀ ಆತಂಕ

×

Subscribe to V4news

Get updates delivered right to your inbox!

Thank you for your subscription

×