Get Even More Visitors To Your Blog, Upgrade To A Business Listing >>

ಪುತ್ತೂರು: ಮಹಿಳೆ ನಾಪತ್ತೆ ಪ್ರಕರಣ : ‘ಬಿ’ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ

keerthika-copy

ಪುತ್ತೂರು: ಎರಡು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿದ್ದ ಛಾಯಾಗ್ರಾಹಕರೊಬ್ಬರ ಪತ್ನಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಪುತ್ತೂರು ನಗರ ಪೊಲೀಸರು ಸಲ್ಲಿಸಿರುವ ‘ಬಿ’ ರಿಪೋರ್ಟ್‌ನ್ನು ತಿರಸ್ಕರಿಸಿರುವ ನ್ಯಾಯಾಲಯ ಆಕೆ ಯನ್ನು ಅಪಹರಿಸಿರುವ ಆರೋಪಿ ಗಳಿಬ್ಬರ ವಿರುದ್ದ ಪ್ರಕರಣ ದಾಖಲಿ ಸಿಕೊಳ್ಳುವಂತೆ ಆದೇಶ ನೀಡಿದೆ.
ಪುತ್ತೂರು ನಗರದ ಸಾಮೆತ್ತಡ್ಕದ ಗಿರೀಶ್ ಕಂಪೌಂಡ್ ನಿವಾಸಿ, ಪುತ್ತೂರಿನ ಸ್ಟುಡಿಯೋ ಒಂದರ ಮಾಲಕರಾಗಿದ್ದ ಛಾಯಾ ಚಿತ್ರಗ್ರಾಹಕ ಗಿರಿಧರ್ ಭಟ್ ಅವರ ಪತ್ನಿ ಕೀರ್ತಿಕಾ ಅವರು 11-09-2014 ರಂದು ನಾಪತ್ತೆಯಾಗಿದ್ದರು. ಆಕೆಯನ್ನು ಅಪಹರಿಸಿದ್ದ ಆರೋಪ ಹೊಂದಿದ್ದ ಬೆಂಗಳೂರು ಮೂಲದ ಡೆನ್ಸಸ್ ಡೆವಿಸ್ ಮತ್ತು ಆತನಿಗೆ ಸಹಕ ರಿಸಿದ ಬೆಂಗಳೂರಿನ ಸಂತೋಷ್ ಕುಮಾರ್ ವಿರುದ್ದ ಪ್ರಕರಣ ದಾಖ ಲಿಸುವಂತೆ ನ್ಯಾಯಾಲಯ ಆದೇ ಶಿಸಿದೆ.
ತನ್ನ ಪತ್ನಿ ಕೀರ್ತಿಕಾ ಸೆ.11 ರಂದು ಕಲ್ಲಾರೆಯಲ್ಲಿರುವ ತನ್ನ ತವರು ಮನೆಯಿಂದ ನಾಪತ್ತೆಯಾಗಿದ್ದು, ಆಕೆಯನ್ನು ಬೈಕುಗಳಲ್ಲಿ ಬಂದ ಇಬ್ಬರು ಅಪಹರಿಸಿಕೊಂಡು ಹೋಗಿದ್ದಾರೆಂದು ಗಿರಿಧರ ಭಟ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಗಿರಿಧರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಲಂ 365 ಹಾಗೂ ಭಾರತೀಯ ದಂಡ ಸಂಹಿತೆ ಕಲಂ 34ರಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಕೀರ್ತಿಕಾರನ್ನು ಕರೆದುಕೊಂಡು ಹೋಗಿದ್ದ ಡೆನ್ಸ್‌ಸ್ ಡೆವಿಸ್ ಮತ್ತು ಆತನಿಗೆ ಸಹಕರಿಸಿದ ಆರೋಪದ ಮೇಲೆ ಬೆಂಗಳೂರಿನ ಉದಯನಗರ ಬಳಿಯ ಟಿನ್‌ಫ್ಯಾಕ್ಟರಿ ಸಮೀಪದ ಮುರುಗನ್ ನಿಲಯದ ಚಂದ್ರಮೂರ್ತಿ ಪುತ್ರ ಸಂತೋಷ್ ಕುಮಾರ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಈ ವೇಳೆ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು. ಪ್ರಕರಣದ ವಿಚಾರಣೆ ನ್ಯಾಯಾಲಯ ಹಂತದಲ್ಲಿರುವಾಗಲೇ ಪುತ್ತೂರು ನಗರ ಪೊಲೀಸರು ಆ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಬಿ ರಿಪೂರ್ಟ್ ಸಲ್ಲಿಸಿದ್ದರು.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಸಲ್ಲಿಸಿದ್ದ ಹಿನ್ನಲೆಯಲ್ಲಿ ಗಿರಿಧರ್ ಪುತ್ತೂರು ನ್ಯಾಯಾಲಯ ಮೆಟ್ಟಲೇರಿ ಆಕ್ಷೇಪ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಎಸಿಜೆ‌ಎಂ ನ್ಯಾಯಾಲಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ಬಿ ರಿಪೋರ್ಟ್‌ನ್ನು ತಿರಸ್ಕರಿಸಿ, ಆರೋಪಿಗಳಾದ ಡೆನ್ಸನ್ ಡೇವಿಡ್ ಮತ್ತು ಸಂತೋಷ್ ಕುಮಾರ್ ವಿರುದ್ದ ಕಲಂ ೩೬೩, ೩೪ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ಘಟನೆ ಹಿನ್ನೆಲೆ
ಛಾಯಾಚಿತ್ರಗ್ರಾಹಕ ಗಿರಿಧರ ಭಟ್ ಮತ್ತು ಬಿ.ಇ ಪದವೀಧರೆಯಾಗಿದ್ದ ಕೀರ್ತಿಕಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇದೊಂದು ಅನ್ಯ ಜಾತಿಯ ಪ್ರೇಮ ವಿವಾಹವಾಗಿತ್ತು. ವಿವಾಹವಾದ ಎರಡು ವರ್ಷಗಳ ಬಳಿಕ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೀರ್ತಿಕಾ ಅವರಿಗೆ ಉದ್ಯೋಗ ಲಭಿಸಿತ್ತು. ಪತ್ನಿಗೆ ಉತ್ತಮ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಗಿರಿಧರ್ ಭಟ್ ಪತ್ನಿಯನ್ನು ಬೆಂಗಳೂರಿನಲ್ಲೇ ಬಿಟ್ಟು ಪುತ್ತೂರಿಗೆ ಮರಳಿದ್ದರು. ಈ ನಡುವೆ ಆಕೆಗೆ ಅದೇ ಕಂಪೆನಿಯಲ್ಲಿ ದುಡಿಯುತ್ತಿರುವ ಅನ್ಯ ಕೋಮಿನ ಯುವಕನಾದ ಡೆನ್ಸ್‌ನ ಡೇವಿಡ್ ಎಂಬಾತನ ಜೊತೆಗೆ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿ ಹರಡಿತ್ತು.
ಈ ಮಾಹಿತಿ ಅರಿತ ಗಿರಿಧರ್ ಭಟ್ ಮತ್ತು ಕೀರ್ತಿಕಾ ಮನೆಯವರು ಬೆಂಗಳೂರಿನಿಂದ ಆಕೆಯನ್ನು ಪುತ್ತೂರಿಗೆ ಕರೆತಂದು ಆಕೆಯ ತವರು ಮನೆಯಲ್ಲೇ ಇರಿಸಿದ್ದರು. ಆದರೆ ಈ ನಡುವೆಯೂ ಕೀರ್ತಿಕಾ ಡೆನ್ಸ್‌ನ್ ಡೇವಿಡ್‌ನೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರು. ಜೊತೆಗೆ ಪರಾರಿಯಾಗುವ ಸ್ಕೆಚ್ ರೂಪಿಸಿ ಪುತ್ತೂರಿನ ಸಾಮತ್ತಡ್ಕದ ಮನೆಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆ ಹಲವಾರು ಊಹಾಪೋಹಕ್ಕೆ ಕಾರಣವಾಗುವ ಜೊತೆಗೆ ಕುತೂಹಲ ಸೃಷ್ಟಿಸಿತ್ತು.
ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಡೆನ್ಸ್‌ನ್ ಡೇವಿಡ್ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಹೋದ ಬಳಿಕ ನಾಪತ್ತೆಯಾಗಿದ್ದು, ವಾಸ್ತವ್ಯವನ್ನು ಬದಲಾಯಿಸಿಕೊಂಡಿದ್ದಾನೆಂದು ತಿಳಿದು ಬಂದಿದೆ. ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಮುಕ್ತಾಯಗೊಳಿಸಿದ್ದರು. ಆದರೆ ನ್ಯಾಯಾಲಯದ ಆದೇಶದಿಂದಾಗಿ ಇದೀಗ ಮತ್ತೆ ಪ್ರಕರಣ ಜೀವಂತವಾಗಿದೆ.This post first appeared on V4news, please read the originial post: here

Share the post

ಪುತ್ತೂರು: ಮಹಿಳೆ ನಾಪತ್ತೆ ಪ್ರಕರಣ : ‘ಬಿ’ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ

×

Subscribe to V4news

Get updates delivered right to your inbox!

Thank you for your subscription

×