Get Even More Visitors To Your Blog, Upgrade To A Business Listing >>

ಪಡುಬಿದ್ರಿ : ಹೆದ್ದಾರಿ ಕಾಮಗಾರಿಗೆ ಇನ್ನೂ ದೊರಕ್ಕಿಲ್ಲ ಚಾಲನೆ : ಅಂದು ನ್ಯಾಯಾಲಯದ ತಡೆ ಎಂದಾಯಿತು.. ಇದೀಗ ಹಣದ ಕೊರತೆಯಂತೆ..

Tags: agravesup

vlcsnap-2016-12-09-12h00m06s250-copy

ಈ ಭಾಗದ ರಾಜಕೀಯ ಧುರೀಣರಿಂದ ಸಂಪೂರ್ಣವಾಗಿ ನಿರ್ಲಕ್ಷೀಸಲ್ಪಟ್ಟ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಅಂದು ನ್ಯಾಯಾಲಯದಿಂದ ತಡೆ ಇದೆ ಎಂಬುದಾಗಿ ಕಾಮಗಾರಿ ತಡೆ ಹಿಡಿಯಲ್ಪಟ್ಟರೆ, ಇದೀಗ ಗುತ್ತಿಗೆ ವಹಿಸಿಕೊಂಡಿರುವ ಮಂದಿಯಲ್ಲಿ ಹಣವಿಲ್ಲದಿರುವುದರಿಂದ ಕಾಮಗಾರಿಗೆ ಚಾಲನೆಯೇ ದೊರೆತಿಲ್ಲ ಎಂಬುದು ಗುತ್ತಿಗೆ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.vlcsnap-2016-12-09-12h00m19s124-copyಈ ಸಮಸ್ಯೆಯ ಬಗ್ಗೆ ಚರ್ಚಿಸಿ ಒಂದು ಮಹತ್ತರ ನಿರ್ಧಾರವನ್ನು ಕೈಗೊಳ್ಳ ಬೇಕಾದ ಈ ಭಾಗದ ಜನಪ್ರತಿನಿಧಿಗಳು ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಜಾಣ ಮೌನ ತಾಳಿದ್ದಾರೆ. ಇಂಥಹ ವ್ಯಕ್ತಿಗಳನ್ನು ಜನಪ್ರತಿನಿಧಿಗಳಾಗಿ ಆರಿಸಿ ಕಳುಹಿಸಿದ ಈ ಭಾಗದ ಮತದಾರ ತಾವು ಮಾಡಿದ ತಪ್ಪಿಗಾಗಿ ಕೊರಗುತ್ತಿದ್ದೇವೆ ಎನ್ನುತ್ತಾರೆ.
ಪಡುಬಿದ್ರಿ ಪೇಟೆಯಲ್ಲಿ ನಿರಂತವಾಗಿ ನಡೆಯುತ್ತಿರುವ ರಸ್ತೆ ಬ್ಲಾಕ್‌ನಿಂದಾಗಿ ಮೂರು ಕೀ.ಮೀ. ರಸ್ತೆಯನ್ನು ಆಕ್ರಮಿಸಿಲು ಘಂಟೆಗಟ್ಟಲೆ ಕಾಯ ಬೇಕಾದ ದುಸ್ಥಿತಿ ಒಂದು ಕಡೆಯಾದರೆ, ಇಕ್ಕಾಟ್ಟಾದ ರಸ್ತೆಯಲ್ಲಿ ವಾಹನಗಳ ವೇಗವನ್ನು ಗಮನಿಸಲಾಗದೆ ಅದೇಷ್ಟೋ ಅಮಾಯಕರ ವಾಹನಗಳು ಅಪಘಾತಕ್ಕೀಢಾಗಿ ಪ್ರಾಣವನ್ನು ಕಳಕೊಳ್ಳುವುದೂ ಆಗಿದೆ. ಈ ಘಟನೆಯಿಂದಾದರೂ ಎಚ್ಚರಗೊಳ್ಳ ಬೇಕಾಗಿದ್ದ ಜನಪ್ರತಿನಿಧಿಗಳಾಗಲೀ.. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ತಮ್ಮ ಕರ್ತವ್ಯ ಮರೆತು ಎಸಿ ಕೋಣೆಯಲ್ಲಿ ತಣ್ಣಗಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.
ಎರಡು ತಂಡಗಳ ವಿವಾದದ ನಡುವೆಯೂ ಏಕಪಕ್ಷೀಯವಾಗಿ ಐತಿಹಾಸಿಕ ಪಡುಬಿದ್ರಿ ಪೇಟೆ ಎಂಬುದಾಗಿ ಹೇಳಿ ಮರೆಯಾದ ಈ ಭಾಗದ ಸಂಸದೆ ಶೋಭ ಕರಂದ್ಲಾಜೆ ಇಂದಿಗೂ ನಾಪತ್ತೆ..! ಶಾಸಕರಂತ್ತೂ ಹತ್ತಾರು ಬಾರಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಎಲ್ಲಿಯೂ ಯಾವ ಕಾರ್ಯಕ್ರಮದಲ್ಲೂ ಈ ಬಗ್ಗೆ ಮಾತೆತ್ತಿದಂತ್ತಿಲ್ಲ. ಸಂಸದೆಗೆ ಇಲ್ಲಿನ ಹೆದ್ದಾರಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಬೇಕಾಗಿದ್ದ ಅವರದ್ದೇ ಪಕ್ಷದ ತಾ.ಪಂ. ಸದಸ್ಯರಾಗಲೀ.. ಜಿ.ಪಂ. ಸದಸ್ಯರಾಗಲೀ ಇದನ್ನು ಸಮಸ್ಯೆಯಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ ಎಂಬುದು ಈ ಹೆದ್ದಾರಿಯಿಂದ ನಿತ್ಯ ಸಮಸ್ಯೆ ಅನುಭವಿಸುತ್ತಿರುವ ಜನರ ಮಾತು.ಟೋಲ್‌ಗೇಟ್ ಸಂಧಿಸ ಬೇಕಾಗಿದ್ದ ಸುಮಾರು ಮೂರು ಕೀ.ಮೀ. ದೂರದವರಗೆ ಹೆದ್ದಾರಿ ಛಿಂದಿಯಾಗಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುದು ಒಂದು ಕಡೆಯಾದರೆ, ಚತುಷ್ಪಥ ಕಾಮಗಾರಿ ನಡೆದ ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳದೆ ಶಾಲಾ ವಾಹನಗಳು ಸಹಿತ ಇತರೆ ವಾಹನಗಳು ವಿರುದ್ಧ ದಿಕ್ಕಿನಿಂದ ಚಲಿಸಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗುತ್ತಿದರೂ, ಇದನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿದೆ ನವಯುಗ್ ಕಂಪನಿ. ಈ ಟೋಲ್ ವಿರುದ್ಧ ಸ್ಥಳೀಯ ಶಾಸಕರನ್ನು ಸೇರಿಸಿ ಹೋರಾಟಕ್ಕೆ ಮುನ್ನುಡಿ ಬರೆದ ಸ್ಥಳೀಯ ಸಂಸ್ಥೆಯೊಂದು ಆಗೋಮ್ಮೆ ಈಗೋಮ್ಮೆ ಪತ್ರಿಕಾ ಹೇಳಿಕೆ ಬಿಟ್ಟರೆ ನಿರೀಕ್ಷಿತ ಹೋರಾಟದ ಕಿಚ್ಚು ಗೋಚರಿಸುತ್ತಿಲ್ಲ.
ಮೂರು ಬಾರಿ ಹೆದ್ದಾರಿಯ ಇಕ್ಕೆಲುಗಳನ್ನು ಸ್ವಚ್ಚಗೊಳಿಸಿ ಕಾಮಗಾರಿಯ ಮುನ್ನುಸೂಚನೆ ನೀಡಿರುವ ಇಲಾಖೆ ಇದೀಗ ನಾಲ್ಕನೇ ಬಾರಿ ಸ್ವಚ್ಚಗೊಳಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ನಡೆಸುತ್ತಿದ್ದು, ಕಾಮಗಾರಿ ಆರಂಭಗೊಳಿಸುವ ಸೂಚನೆ ಕಂಡು ಬರುತ್ತಿಲ್ಲ, ಸರ್ಕಾರದ ಪ್ರತಿಯೋಂದು ಯೋಜನೆಗಳನ್ನು ಜನರು ಹೋರಾಟ ನಡೆಸಿಯೇ ಪಡೆಯ ಬೇಕೆಂಬ ನಿರ್ಧಾರಕ್ಕೆ ಹೆದ್ದಾರಿ ಇಲಾಖೆ ಬಂದಂತ್ತಿದ್ದು, ಮುಂದಿನ ದಿನದಲ್ಲಿ ಪಡುಬಿದ್ರಿಯಲ್ಲಿನ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಜನ ಪಕ್ಷಭೇದ ಜಾತಿ ಭೇದ ಮರೆತು ಹೋರಾಟಕ್ಕೆ ಧುಮುಕುವ ಅನಿರ್ವಾಯತೆನಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

ವರದಿ-ಸುರೇಶ್ ಎರ್ಮಾಳ್This post first appeared on V4news, please read the originial post: here

Share the post

ಪಡುಬಿದ್ರಿ : ಹೆದ್ದಾರಿ ಕಾಮಗಾರಿಗೆ ಇನ್ನೂ ದೊರಕ್ಕಿಲ್ಲ ಚಾಲನೆ : ಅಂದು ನ್ಯಾಯಾಲಯದ ತಡೆ ಎಂದಾಯಿತು.. ಇದೀಗ ಹಣದ ಕೊರತೆಯಂತೆ..

×

Subscribe to V4news

Get updates delivered right to your inbox!

Thank you for your subscription

×