Get Even More Visitors To Your Blog, Upgrade To A Business Listing >>

ಕಾಸರಗೋಡು, ಕಣ್ಣೂರು ಐಟಿ ಪಾರ್ಕ್, ಚೀಮೇನಿ, ಎರ್ಮಂ ಇಕ್ಕಡೆಯಲ್ಲೂ ಸ್ಥಗಿತ, ಹಳ್ಳಿಗರಿಗೆ ಉದ್ಯೋಗ ಬರೀ ಕನಸು

it-park-8-12

ಕಾಸರಗೋಡು ಜಿಲ್ಲೆಯ ಚೀಮೇನಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಮಹತ್ವಾಕಾಂಕ್ಷೆಯ ಐ. ಟಿ. ಪಾರ್ಕ್ ಕಾಮಗಾರಿ ಕಳೆದ ಮೂರು ತಿಂಗಳಿಂದ ನಿಲುಗಡೆಗೊಂಡಿದೆ.
ಐ. ಟಿ. ಇಲಾಖೆ ನಿರ್ದೇಶನದಂತೆ ಚೀಮೇನಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಐ. ಟಿ. ಪಾರ್ಕ್ ಕಾಮಗಾರಿ ಇದ್ದಕ್ಕಿದ್ದಂತೆ ನಿಲುಗಡೆಗೊಂಡು ಮೂರು ತಿಂಗಳಿಗೂ ಹೆಚ್ಚು ದಿನಗಳಾದವು. ಜಿಲ್ಲೆಯಲ್ಲಿ ಕಾಮಗಾರಿ ನಿಲುಗಡೆಗೊಂಡಂತೆ ಕಣ್ಣೂರು ಜಿಲ್ಲೆಯ ಎರ್ಮಂನಲ್ಲೂ ಐ. ಟಿ. ಪಾರ್ಕ್ ನಿರ್ಮಾಣ ಕಾಮಗಾರಿ ನಿಲುಗಡೆಗೊಂಡಿದೆ. ೨೦೧೦ರಲ್ಲಿ ಚೀಮೇನಿಯಲ್ಲಿ ಐ. ಟಿ. ಪಾರ್ಕ್ ನಿರ್ಮಿಸಲು ಶಿಲಾನ್ಯಾಸ ಮಾಡಲಾಗಿತ್ತು. ೨೦೧೫ ಡಿಸೆಂಬರ್ ಕಟ್ಟಡ ನಿರ್ಮಾಣ ಟೆಂಡರ್ ಪ್ರಕ್ರಿಯೆ ಪೂರ್ತಿಗೊಳಿಸಲಾಗಿತ್ತು. ಒಂದು ವರ್ಷದೊಳಗೆ ೫೦ ಸಾವಿರ ಚದುರ ಅಡಿ ಕಟ್ಟಡವನ್ನು ಪೂರ್ತಿಗೊಳಿಸಲು ತೀರ್ಮಾನಿಸಲಾಗಿತ್ತು. ಮುಂದಿನ ವರ್ಷ ೨೦೧೭ ಮಾರ್ಚ್ ತಿಂಗಳಾಂತ್ಯದಲ್ಲಿ ಕಟ್ಟಡ ನಿರ್ಮಾಣ ಪೂರ್ತಿಗೊಳಿಸಬೇಕಾಗಿದ್ದರೂ, ಇದೀಗ ಕಟ್ಟಡ ನಿರ್ಮಾಣ ಕಾಮಗಾರಿ ನಿಲುಗಡೆಗೊಂಡಿರುವುದರಿಂದ ಕಟ್ಟಡ ಪೂರ್ಣಗೊಳ್ಳುವುದು ಅನುಮಾನ.
ಎರ್ನಾಕುಳಂ ಕೇಂದ್ರವಾಗಿರಿಸಿರುವ ಕಂಪೆನಿಯೊಂದು ಚೀಮೇನಿ ಮತ್ತು ಕಣ್ಣೂರು ಜಿಲ್ಲೆಯ ಎರ್ಮಂನಲ್ಲೂ ಐ. ಟಿ. ಪಾರ್ಕ್ ನಿರ್ಮಾಣ ಮಾಡುವ ಕರಾರಿಗೆ ಸಹಿ ಹಾಕಿತ್ತು. ಈ ಎರಡೂ ಐ. ಟಿ. ಪಾರ್ಕ್ ಮತ್ತು ಕಟ್ಟಡ ನಿರ್ಮಾಣದ ಜವಾಬ್ದಾರಿ ಈ ಕಂಪೆನಿ ಹೊತ್ತಿತ್ತು. ಚೀಮೇನಿಯಲ್ಲಿ ನಿರ್ಮಾಣದ ಪ್ರಥಮ ಹಂತದ ಫೌಂಡೇಶನ್ ಬೋಲ್ಟ್ ಅಳವಡಿಸುವ ಪ್ರಕ್ರಿಯೆ ಪೂರ್ತಿಯಾಗಿದೆ. ದ್ವಿತೀಯ ಹಂತದಲ್ಲಿ ನಿರ್ಮಾಣದಂಗವಾಗಿ ಕಬ್ಬಿಣ ಸರಳುಗಳನ್ನು ಸ್ಥಾಪಿಸುವ ಕಾಮಗಾರಿ ನಡೆಯಬೇಕು. ಇದಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಐ. ಟಿ. ಇಲಾಖೆ ನೀಡಬೇಕಾಗಿದ್ದರೂ, ಈವರೆಗೂ ತಲುಪಿಲ್ಲ.
ಐ. ಟಿ. ಪಾರ್ಕ್ ನಿರ್ಮಾಣಕ್ಕೆ ೧೦೦ ಎಕರೆ ಸ್ಥಳವಿದ್ದು, ಈಗಾಗಲೇ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸುತ್ತುಗೋಡೆಯನ್ನು ನಿರ್ಮಿಸಲಾಗಿದೆ. ಈ ಪೈಕಿ ೨೫ ಎಕರೆ ಸ್ಥಳ ಐ. ಟಿ.ಗೆ ಅಗತ್ಯವಿರುವ ಆರ್ಥಿಕ ವಲಯದ್ದಾಗಿದೆ. ಐ. ಟಿ. ಪಾರ್ಕ್ ನಿರ್ಮಾಣ ಕಾಮಗಾರಿ ನಿಲುಗಡೆಗೊಳಿಸಲು ಕಾರಣಗಳಾಗುವುದು ಎಂಬ ಬಗ್ಗೆ ಐ. ಟಿ. ಇಲಾಖೆ ಯಾವುದೇ ಮಾಹಿತಿ ನೀಡುತ್ತಿಲ್ಲ.This post first appeared on V4news, please read the originial post: here

Share the post

ಕಾಸರಗೋಡು, ಕಣ್ಣೂರು ಐಟಿ ಪಾರ್ಕ್, ಚೀಮೇನಿ, ಎರ್ಮಂ ಇಕ್ಕಡೆಯಲ್ಲೂ ಸ್ಥಗಿತ, ಹಳ್ಳಿಗರಿಗೆ ಉದ್ಯೋಗ ಬರೀ ಕನಸು

×

Subscribe to V4news

Get updates delivered right to your inbox!

Thank you for your subscription

×