Get Even More Visitors To Your Blog, Upgrade To A Business Listing >>

ಮಂಗಳೂರು ರೈಲು ನಿಲ್ದಾಣದ ಒಂಟಿ ಕಾಲಿನ ಕಾಗೆ, ಕಾಲು ಕಳಕೊಂಡಲ್ಲೇ ನಡೆದಿದೆ ಆತ್ಮವಿಶ್ವಾಸದ ಬದುಕು

Tags: agravesup

kaage

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಒಂಟಿ ಕಾಲಿನ ಕಾಗೆಯೊಂದು ಯಾರನ್ನೂ ಅವಲಂಬಿಸದೆ ತನ್ನ ಬದುಕನ್ನು ಸಾಗಿಸಿದೆ.
ರೈಲು ನಿಲ್ದಾಣಗಳಲ್ಲಿ ಕೆಲವು ಹಕ್ಕಿಗಳು, ದಂಶಕಗಳು, ನಾಯಿಗಳು ಅಲ್ಲೇ ಮನೆಮಾಡಿಕೊಂಡು ಪ್ರಯಾಣಿಕರು ಎಸೆಯುವ ಆಹಾರಗಳನ್ನು ಹೆಕ್ಕಿ ತಿಂದು ಬದುಕು ಸಾಗಿಸುತ್ತವೆ. ಅಂತವುಗಳಲ್ಲಿ ಕಾಗೆಗಳೂ ಇವೆ. ಬೆಳಗ್ಗಿನ ಹೊತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಮೂರನೇ ಪ್ಲಾಟ್‌ಫಾರಂನ ಸಮಾನಾಂತರದಲ್ಲಿರುವ ನೀರಿನ ಪೈಪ್ ಮೇಲೆ ಕೂರುವ ಹಕ್ಕಿಗಳಲ್ಲಿ ಒಂಟಿಕಾಲಿನ ಕಾಗೆಯೊಂದನ್ನು ನೋಡಬಹುದು. ಈ ಕಾಗೆಯನ್ನು ಸದಾ ಪ್ರಯಾಣಿಕರೊಬ್ಬರು ಮೂರು ವರ್ಷಗಳಿಂದ ಗಮನಿಸುತ್ತಿದ್ದಾರೆ. ಪಕ್ಷಿಲೋಕದಲ್ಲಿ ಊನಾಂಗರಿಗೆ ಸಹಾಯ ಮಾಡುವ ಸಂಸ್ಥೆ ಯಾವುದೂ ಇಲ್ಲವಾದ್ದರಿಂದ ಈ ಕಾಗೆ ಒಂಟಿ ಕಾಲಿನಲ್ಲೇ ತನ್ನ ಬದುಕನ್ನು ತಾನೇ ಸಾಗಿಸಿದೆ.
ಸದರಿ ಪ್ರಯಾಣಿಕರ ಅಭಿಪ್ರಾಯದಂತೆ ೪ ವರುಷಗಳಷ್ಟು ಹಿಂದೆ ಆಹಾರ ಅರಸುವ ಭರದಲ್ಲಿ ಈ ಕಾಗೆ ಓಡುವ ರೈಲಿಗೆ ತನ್ನ ಒಂದು ಕಾಲನ್ನು ಬಲಿಗೊಟ್ಟಿರಬೇಕು. ಆದರೂ ಆ ರೈಲು ನಿಲ್ದಾಣದಲ್ಲೇ ಇಂದಿಗೂ ಬಿಸುಟ ಆಹಾರ ಅರಸಿ ತಿಂದು ತನ್ನ ಬದುಕನ್ನು ಸಾಗಿಸಿದೆ. ನೋಡುಗರಿಗೆ ಇದು ಒಂದು ನಿಮಿಷದ ಅಚ್ಚರಿಯಾದರೂ ಅದಕ್ಕೆ ಅದು ಆತ್ಮವಿಶ್ವಾಸದ ಬದುಕು.This post first appeared on V4news, please read the originial post: here

Share the post

ಮಂಗಳೂರು ರೈಲು ನಿಲ್ದಾಣದ ಒಂಟಿ ಕಾಲಿನ ಕಾಗೆ, ಕಾಲು ಕಳಕೊಂಡಲ್ಲೇ ನಡೆದಿದೆ ಆತ್ಮವಿಶ್ವಾಸದ ಬದುಕು

×

Subscribe to V4news

Get updates delivered right to your inbox!

Thank you for your subscription

×