Get Even More Visitors To Your Blog, Upgrade To A Business Listing >>

ಬೋಳ ಪಾಲಿಂಗೇರಿ: ಹಲಗೆ ಕಾಣದ ಕಿಂಡಿ ಅಣೆಕಟ್ಟು : ಕೃಷಿಗೆ ಬಿತ್ತು ಪೆಟ್ಟು

vlcsnap-2016-12-08-22h57m46s14-copy

ಸ್ವಾತಂತ್ಯ ಪೂರ್ವದಲ್ಲಿ ಇಲ್ಲಿನ ಕ್ರಷಿಕರು ಸ್ವಯಂ ಪ್ರೇರಿತರಾಗಿ ಹುಲ್ಲು ಮಣ್ಣು ಹೊತ್ತು ತಂದು ನದಿಗೆ ಒಡ್ಡು ಕಟ್ಟಿ ಸಾಕಷ್ಟು ನೀರು ಪಡೆದು ಕೃಷಿ ಬದುಕು ನಡೆಸುತ್ತಿದ್ದ ಕಾಲ,ತದನಂತರ ಶತಮಾನದಿಂದೀಚೆಗೆ ಇಲ್ಲೊಂದು ಸರಕಾರಿ ಕಿಂಡಿ ಅಣೆಕಟ್ಟು ರಚನೆಯಾದ ಬಳಿPವೂ ನೀರಿಗೆ ಬರ ಉಂಟಾಗಲಿಲ್ಲ ಸುಮಾರು 4 ವರ್ಷಗಳಿಂದ ಈ ಕಿಂಡಿ ಆಣೆಕಟ್ಟಿಗೆ ಹಲಗೆ ಹಾಕದೆ ಸಂಪೂರ್ಣ ನಿರ್ಲಕ್ಷ್ಯಕ್ಕಿಡಾಗಿದ್ದು ಜನ ಕೃಷಿಯಲ್ಲಿ ವಿಮುಖರಾಗುವಂತೆ ಮಾಡಿದಲ್ಲದೆ ಈ ಭಾಗದ ಕೃಷಿಯ ಮೇಲೆ ಮಾರಕ ಹೊಡೆತ ಬಿದ್ದಿದೆ. ಇದು ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಾಲಿಂಗೇರಿ ಶಾಂಭವಿ ನದಿಗೆ ಕಟ್ಟಿದ ಶತಮಾನದ ಇತಿಹಾಸ ಇರುವ ಕಿಂಡಿ ಅಣೆಕಟ್ಟಿನ ಕಥೆ.vlcsnap-2016-12-08-22h57m37s187-copyಸುಮಾರು ನೂರಾರು ಎಕರೆ ಹೆಚ್ಚು ವಿಶಾಲ ಕೃಷಿ ಭೂಮಿ ಹೊಂದಿರುವ ಬೋಳ ಗ್ರಾಮದ ಪಾಲಿಂಗೇರಿ ಸುತ್ತಮುತ್ತ ಕೃಷಿಕರ ಜೀವ ನಾಡಿಯಾದ ಶಾಂಭವಿ ನದಿ.ಇದಕ್ಕೆ ಕೃಷಿಕರಿಗೆ ಪ್ರಯೋಜನವಾಗಲಿ ಎಂಬ ನೆಲೆಯಲ್ಲಿ ಕಳೆದ ಎಂಬತ್ತು ವರ್ಷಗಳ ಹಿಂದೆ ಹಲವು ಎಕರೆ ಕೃಷಿಗೆ ನೀರುಣಿಸಿದ ಹಳೆ ಕಿಂಡಿ ಅಣೆಕಟ್ಟು ಇದೀಗ ಕಳೆದ 4-5 ವರ್ಷಗಳಿಂದ ಹಲಗೆ ಹಾಕದ ಕಾರಣ ನೀರಿಲ್ಲದೆ ರೈತರ ಕೃಷಿ ಭೂಮಿಗೆ ಬರಡಾಗುತ್ತಿದೆ
ಅಣೆಕಟ್ಟು ಗಟ್ಟಿಮುಟ್ಟಾಗಿದ್ದರೂ ಅದರ ಹಲಗೆ ಮಾತ್ರ ಸಂಪೂರ್ಣ ಗೆದ್ದಲು ಹಿಡಿದೆ, ಸೂಕ್ತ ನಿವರ್ಹಣೆ ಇಲ್ಲದೆ ಹಲಗೆಗಳು ಹಾಳಾಗುತ್ತಿದೆ. ಹರಿದು ಹೋಗುತ್ತಿದ್ದ ಇದ್ದಬದ್ದ್ದ ನೀರನ್ನಾದರೂ ನಿಲ್ಲಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿಕರು ಗೆದ್ದಲು ಹಿಡಿದ ಹಲಗೆಯಿಂದ ಅರ್ಧಂಬರ್ದ ಕಿಂಡಿಗಳನ್ನು ಮುಚ್ಚಿ ನೀರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.ಸರಿಯಾದ ಹಲಗೆ ಇಲ್ಲದ ಕಾರಣ ನೀರು ಸೋರಿ ಹೋಗುತ್ತಿದ್ದು, ನೀರು ಜನವರಿ ತಿಂಗಳವರೆಗೆ ನಿಂತರೆ ಅದೇ ಹೆಚ್ಚು .ಇಲಾಖೆ ಹೊಸ ಹಲಗೆಗಳನ್ನು ನೀಡುತ್ತಿದ್ದರೆ ನಾವು ಸರಿಯಾಗಿ ಅಣಕಟ್ಟನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿತ್ತು ಇದರ ಬಗ್ಗೆ ಹಲವು ವರ್ಷಗಳಿಂದ ಹಲಗೆ ನೀಡುವಂತೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ ಅಂತಾರೆ ಇಲ್ಲಿನ ಕೃಷಿಕರು,ಅಣೆಕಟ್ಟಿನ ಸರಿಯಾದ ನಿರ್ವಹಣೆ ಇಲ್ಲದೆ ನದಿಯಲ್ಲಿ ನೀರು ಹಿಂಗದ ಕಾರಣ ಕೃಷಿಗೆ ಬಿಡಿ ಅಕ್ಕಪಕ್ಕದ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ, ಇಡೀ ಬೋಳಗ್ರಾಮದ ಅಂತರ್ಜಲ ಹೆಚ್ಚಳಕ್ಕೆ ಈ ಕಿಂಡಿ‌ಆಣೆಕಟ್ಟು ತುಂಬ ಪ್ರಯೋಜನಕಾರಿಯಾಗಿತ್ತು.ಅದರೆ ಈ ಸಲ ಮುಂಗಾರು ಕೈಕೊಟ್ಟ ಪರಿಣಾಮ ಮುಂದಿನ ದಿನದಲ್ಲಿ ಜಲಕ್ಷಾಮ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ತಮ್ಮ ಊರಿನ ಅಂvರ್ಜಲ ಉಳಿಸುವ ನಿಟ್ಟಿನಲ್ಲಿ ಅಣೆಕಟ್ಟಿನ ನಿರ್ವಹಣೆ ಅಸಾಧ್ಯವಾದರೂ ಕ್ರಷಿಕರು ಕಷ್ಟಪಟ್ಟು ನೀರು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡ ನಿರ್ಲಕ್ಷತೋರುವ ಕಾರಣ ಮುಂದೊಂದು ಹನಿ ನೀರಿಗಾಗಿ ಪರಿತಪಿಸಬೇಕಾದ ದಿನ ದೂರವಿಲ್ಲ,ಅಂತಾರೆ ಇಲ್ಲಿನ ಜನ. ಕಿಂಡಿ ಅಣೆಕಟ್ಟಿನ ನಿರ್ವಹಣೆ ಇಲ್ಲಿನ ಕೃಷಿಕರ ಸಹಕಾರದಿಂದ ನಿರ್ವಹಿಸುತ್ತಿದ್ದು,ಹಲವು ವರ್ಷಗಳಿಂದ ಹಲಗೆಯ ಸಮಸ್ಯೆಯಿಂದ ಅಳವಡಿಕೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ.ಸಣ್ಣ ನೀರಾವರಿ ಇಲಾಖೆಗೆ ಹಲವು ಬಾರಿ ಮನವಿ ನೀಡದ್ದು ಸರಿಯಾದ ಸ್ಪಂದನೆ ಸಿಗುತ್ತಿಲ್ಲ,. ಇಷ್ಟ್ಟು ವರ್ಷದಿಂದ ಗೆದ್ದಲು ಹಿಡಿದ ಹಲಗೆಯನ್ನೆ ಉಪಯೋಗಿಸಿ ಅಲ್ಪಸ್ವಲ್ಪ ನೀರನ್ನು ಉಳಿಸುವ ಪ್ರಯತ್ನವನ್ನು ಮಾಡಿಕೊಂಡು ಬರುತ್ತಿದ್ದೇವೆ. ನೀರಿಲ್ಲದ ಕಾರಣ ಎಣೆಲು ಬೆಳೆಯನ್ನು ಕೂಡ ಮಾಡುತ್ತಿಲ್ಲ.ಒಟ್ಟಾರೆ ಈ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ಭೂಮಿಯ ಅಂತರ್ಜಲ ಉಳಿಯಲಿ ಎಂಬ ನಿಟ್ಟಿನಲ್ಲಿ ಅಣೆಕಟ್ಟನ್ನು ನಿರ್ವಹಿಸುತ್ತಿದ್ದೇವೆ, ಸಂಬಂಧಪಟ್ಟವರು ಇನ್ನಾದರೂ ಎಚ್ಚೇತ್ತು ಕೃಷಿಕರ ಕಷ್ಟಕ್ಕೆ ಸ್ಫಂದಿಸಲಿ
ಪ್ರಸನ್ನಸಚ್ಚೇರಿಪೇಟೆThis post first appeared on V4news, please read the originial post: here

Share the post

ಬೋಳ ಪಾಲಿಂಗೇರಿ: ಹಲಗೆ ಕಾಣದ ಕಿಂಡಿ ಅಣೆಕಟ್ಟು : ಕೃಷಿಗೆ ಬಿತ್ತು ಪೆಟ್ಟು

×

Subscribe to V4news

Get updates delivered right to your inbox!

Thank you for your subscription

×