Get Even More Visitors To Your Blog, Upgrade To A Business Listing >>

ಉಳ್ಳಾಲ: ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ : ಮಕ್ಕಳ ದಿನಾಚರಣೆ : ವಾರ್ಷಿಕೋತ್ಸವ

vlcsnap-2016-12-07-18h52m49s74-copy

ಮಹಿಳೆಯರು ಸಬಲರು ಅನ್ನುವುದನ್ನು ತೋರಿಸುವಲ್ಲಿ ದುರ್ಗಾವಾಹಿನಿ ಮಹಿಳಾ ಸಂಘಟನೆ ಯಶಸ್ವಿಯಾಗಿದ್ದು, ಗ್ರಾಮ ತಾಲೂಕುಗಳ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಸಂಘಟನೆಯ ಕಾರ‍್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಭಿಪ್ರಾಯಪಟ್ಟರು. vlcsnap-2016-12-07-18h53m17s99-copy

vlcsnap-2016-12-07-18h53m33s4-copy

vlcsnap-2016-12-07-18h53m50s172-copy

vlcsnap-2016-12-07-18h54m12s136-copyಅವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ, ಮುನ್ನೂರು ಗ್ರಾಮ ಪಂಚಾಯತ್ ಮತ್ತು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಮಂಗಳೂರು ಆರೋಗ್ಯ ಇಲಾಖೆ ಇವರ ಸಹಯೋಗದೊಂದಿಗೆ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಕಟ್ಟಡದಲ್ಲಿ ಜರಗಿದ ಗ್ರಾಮ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ವಾರ್ಷಿಕೋತ್ಸವದಲ್ಲಿ ಸ್ತ್ರೀ ಶಕ್ತಿ ಗುಂಪಿನ ವಸ್ತುಗಳ ಪ್ರದರ್ಶನ iತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಬದುಕನ್ನು ರೂಪಿಸಲು ಮಹಿಳಾ ಸಂಘಟನೆಗಳು ಸಹಕಾರಿ. ಅವರು ತಯಾರಿಸಿದ ಸೊತ್ತುಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿ ಮಾರಾಟಕ್ಕೆ ಇಡುವಂತ ಕಾರ‍್ಯ ಅವರ ಶ್ರಮಕ್ಕೆ ಸಿಗುವ ಪ್ರತಿಫಲ. ಆರೋಗ್ಯ ಕುರಿತ ಜಾಗೃತಿ , ಮಹಿಳೆಯರಿಗೆ ಆರೋಗ್ಯದ ಕುರಿತ ಮಾಹಿತಿ ನೀಡುವ ಕಾರ‍್ಯ ಸಂಘಟನೆಯಿಂದ ಆಗುತ್ತಿದ್ದು, ಇದು ಮಹಿಳೆಯರಿಗೆ ಒಳ್ಳೆಯ ಅವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಬಿಜೆಪಿ ಮುಖಂಡೆ ಲಲಿತಾ ಸುಂದರ್ ಉದ್ಘಾಟಿಸಿದರು. ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ರೇಖಾ ಪ್ರವೀಣ್ , ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ನಗರಸಭೆ ವಿರೋಧ ಪಕ್ಷದ ನಾಯಕಿ ಮಹಾಲಕ್ಷ್ಮೀ, ಪೆರ್ಮನ್ನೂರು ಹಾಗೂ ಉಳ್ಳಾಲದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿಯರಾದ ಶಂಕರಿ ಹಾಗೂ ಕಲ್ಪನಾ, ದುರ್ಗಾವಾಹಿನಿ ಮಹಿಳಾ ಮಂಡಲದ ಸಲಹೆಗಾರರಾದ ಪವಿತ್ರ ಗಟ್ಟಿ ಕುತ್ತಾರು, ಕಟ್ಟಡ ಸಮಿತಿ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಜಯಂತಿ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಸುನಿತಾ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ನಿರ್ವಹಿಸಿದರು. ಶಶಿಕಲಾ ವಂದಿಸಿದರು.
ಇದೇ ಸಂದರ್ಭ ಮಹಿಳೆಯರಿಗೆ ಬೀಡಿ ಕಟ್ಟುವುದು, ಮೂಡೆ ಕಟ್ಟುವ ಸ್ಪರ್ಧೆ ಸಹಿತಿ ವಿವಿಧ ಪ್ರತಿಭಾ ಪ್ರದರ್ಶನಗಳು ನಡೆಯಿತು.This post first appeared on V4news, please read the originial post: here

Share the post

ಉಳ್ಳಾಲ: ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ : ಮಕ್ಕಳ ದಿನಾಚರಣೆ : ವಾರ್ಷಿಕೋತ್ಸವ

×

Subscribe to V4news

Get updates delivered right to your inbox!

Thank you for your subscription

×