Get Even More Visitors To Your Blog, Upgrade To A Business Listing >>

ಭಾರತಕ್ಕೆ ಬ್ರಿಟನ್ನಿನ ವೀಸಾ ಬರೆ, ಹೊಸ ನಿಯಮದಿಂದ ವಲಸೆ ತಡೆ, ಭಾರತದ ವ್ಯವಹಾರಕ್ಕೂ ಏಟು

uk-tweaks-visa-norms-to-hit-indian-techies-hard

ಹೆಚ್ಚುತ್ತಿರುವ ವಲಸೆ ಬರುವವರ ಸಂಖ್ಯೆಗೆ ಕಡಿವಾಣ ಹಾಕಲು ಬ್ರಿಟನ್ ತನ್ನ ವೀಸಾ ನೀತಿಗಳಲ್ಲಿ ಬದಲಾವಣೆ ತಂದಿದ್ದು, ಅಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಹೊಸ ವೀಸಾ ನೀತಿಯನ್ನು ಘೋಷಿಸಿರುವ ಯುಕೆ ಗೃಹ ಕಚೇರಿ ನವೆಂಬರ್ ೨೪ರ ಬಳಿಕ ಟೈರ್ ೨ ವೀಸಾ ಇಂಟ್ರಾ ಕಂಪನಿ ಟ್ರಾನ್ಸ್ಫರ್ ವಿಭಾಗದಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸಲಾಗಿದ್ದು, ಈ ಹಿಂದೆ ಇದ್ದ ೨೦,೮೦೦ ಪೌಂಡ್ಗಳ ಬದಲಾಗಿ ಕನಿಷ್ಠ ೩೦,೦೦೦ ಪೌಂಡ್ ಗಳ ವೇತನವನ್ನು ಹೊಂದಿರಬೇಕಾಗುತ್ತದೆ. ಬ್ರಿಟನ್ನ ವಲಸೆ ಸಲಹಾ ಸಮಿತಿಯ ಮಾಹಿತಿ ಪ್ರಕಾರ ಐಸಿಟಿ ವಿಭಾಗದಲ್ಲಿ ನೀಡಲಾಗುವ ವೀಸಾದ ಶೇ. ೯೦ರಷ್ಟು ವೀಸಾವನ್ನು ಭಾರತೀಯ ಐಟಿ ಉದ್ಯೋಗಿಗಳು ಪಡೆಯುತ್ತಾರೆ. ಐಸಿಟಿ ವಿಭಾಗದಲ್ಲಿ ಭಾರತೀಯ ಐಟಿ ನೌಕರರೇ ಅತಿ ಹೆಚ್ಚು ಅರ್ಜಿ ಸಲ್ಲಿಸುವುದರಿಂದ ವೀಸಾ ನೀತಿ ಬದಲಾವಣೆಯಾಗಿರುವುದು ಭಾರತೀಯ ಐಟಿ ನೌಕರರ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಬ್ರಿಟನ್ ಪ್ರಧಾನಿ ತೆರೆಸಾ ಮೇ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಕೆಲವೇ ದಿನಗಳ ಮುನ್ನ ಬ್ರಿಟನ್ ತನ್ನ ವೀಸಾ ನೀತಿಯನ್ನು ಬದಲಾವಣೆ ಮಾಡಿರುವುದು ಗಮನಾರ್ಹ ಅಂಶವಾಗಿದೆ.
ಟೈರ್ ೨ ಐಸಿಟಿ ವಿಭಾಗದ ವೀಸಾ ನಿಬಂಧನೆಗಳಲ್ಲಿ ಕನಿಷ್ಟ ವೇತನ ಪ್ರಮಾಣವನ್ನು ಹೆಚ್ಚಿಸಿರುವುದರೊಂದಿಗೆ ಟೈರ್ ೨ ಸಾಮಾನ್ಯ ವಿಭಾಗದ ವೀಸಾದಲ್ಲಿಯೂ ವೇತನ ಮಿತಿಯನ್ನು ೨೫,೦೦೦ ಪೌಂಡ್ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ಈ ವಿಭಾದಲ್ಲಿ ಕೆಲವು ವಿನಾಯಿತಿ ನೀಡಲಾಗಿದ್ದು ಟೈರ್ ೨ ಪದವಿ ತರಬೇತಿ ವೇತನ ಮಿತಿಯನ್ನು ೨೩,೦೦೦ ಪೌಂಡ್ ಗಳಿಗೆ ಇಳಿಕೆ ಮಾಡಿ, ವಾರ್ಷಿಕವಾಗಿ ಪ್ರತಿ ಕಂಪನಿಗೆ ನೀಡಲಾಗುವ ಸ್ಥಾನಗಳನ್ನು ೨೦ ಕ್ಕೆ ಏರಿಕೆ ಮಾಡಲಾಗಿದೆ, ಇದೆ ವೇಳೆ ಟೈರ್ ೨ ಐಸಿಟಿ ಕೌಶಲಗಳನ್ನು ವರ್ಗಾವಣೆ ಉಪವಿಭಾಗವನ್ನು ಮುಚ್ಚಲಾಗಿದೆ. ಡಾಕ್ಟರೇಟ್ ವಿಸ್ತರಣೆ ಯೋಜನೆ ನಿರ್ವಹಣೆ ಅಗತ್ಯಗಳನ್ನು ಒಳಗೊಂಡಂತೆ ಟೈರ್ ೪ ವಿಭಾಗದ ವೀಸಾದಲ್ಲಿಯೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಎರಡೂವರೆ ವರ್ಷಗಳ ನಂತರ ೫ ವರ್ಷಗಳು ಬ್ರಿಟನ್ ನಲ್ಲೆ ವಾಸಿಸಲು ಪಡೆಯುವ ವೀಸಾಗೆ ಇಂಗ್ಲಿಷ್ ಭಾಷೆ ಅಗತ್ಯತೆಗಳನ್ನು ವೀಸಾ ನೀತಿಯಲ್ಲಿ ಸೇರಿಸಲಾದ್ದು, ಭಾರತೀಯರು ಸೇರಿದಂತೆ ಬ್ರಿಟನ್ ನ ಹೊರಗಿನ ಪ್ರಜೆಗಳ ಮೇಲೆ ಪರಿಣಾಮ ಬೀರಲಿದೆ. ಇಂಗ್ಲಿಷ್ ಭಾಷೆಯ ಅಗತ್ಯತೆ ಬ್ರಿಟನ್ ಗೆ ಕುಟುಂಬ ಸಮೇತ ವಲಸೆ ಹೋಗುವ ನೌಕರರ ಪೋಷಕರು ಸಂಗಾತಿಗೂ ಅನ್ವಯವಾಗಲಿದೆ.This post first appeared on V4news, please read the originial post: here

Share the post

ಭಾರತಕ್ಕೆ ಬ್ರಿಟನ್ನಿನ ವೀಸಾ ಬರೆ, ಹೊಸ ನಿಯಮದಿಂದ ವಲಸೆ ತಡೆ, ಭಾರತದ ವ್ಯವಹಾರಕ್ಕೂ ಏಟು

×

Subscribe to V4news

Get updates delivered right to your inbox!

Thank you for your subscription

×