Get Even More Visitors To Your Blog, Upgrade To A Business Listing >>

ಪುತ್ತೂರು ಬಳಿ ಕಾಟಾಚಾರಕ್ಕೆ ನಿರ್ಮಾಣಗೊಂಡ ಸೇತುವೆ, ಸೇತುವೆಗೂ ರಸ್ತೆಗೂ ಸಂಬಂಧವಿಲ್ಲದಂತೆ ನಿರ್ಮಾಣ

Tags: agravesup

bridge

ತಮ್ಮ ಮೂಲಭೂತ ಸೌಲಭ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವುದು ಸಾಮಾನ್ಯ. ಇಂಥ ಪ್ರತಿಭಟನೆಗಳಿಗೆ ಮಣಿದ ಸರಕಾರ ಹಾಗೂ ಅಧಿಕಾರಿಗಳು ಜನರ ಕಣ್ಣಿಗೆ ಮಣ್ಣೆರೆಚುವ ಕೆಲವು ಕಾಮಗಾರಿಗಳನ್ನು ನಡೆಸುವುದೂ ಸಾಮಾನ್ಯವೇ. ಇಂಥಹುದೇ ಒಂದು ಕಾಟಾಚಾರದ ಸೇತುವೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲೇ ಇದೆ.

bridgeno
ಸೇತುವೆ ನಿರ್ಮಿಸಿಕೊಡಬೇಕೆನ್ನುವ ಜನರ ಒತ್ತಾಯಕ್ಕೆ ಮಣಿದ ನಗರಸಭೆಯ ಅಧಿಕಾರಿಗಳು ಸೇತುವೆಯನ್ನೇನೋ ನಿರ್ಮಿಸಿದರೂ ಈ ಸೇತುವೆಗೂ ರಸ್ತೆಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಇದು ರಾಜ್ಯದ ಎಲ್ಲಾ ಕಡೆಯ ಜನರು ಬುದ್ಧಿವಂತರು ಎಂದು ಕರೆಯಲ್ಪಡುವ ದಕ್ಷಿಣಕನ್ನಡ ಜಿಲ್ಲೆಯ ಸೇತುವೆಯೊಂದರ ಕಥೆ. ಪುತ್ತೂರು ನಗರದ ಮಧ್ಯಭಾಗದಲ್ಲೇ ಇರುವಂತಹ ಮಂಜಲ್ಪಡು, ಸಿಂಗಾಣಿ ಹಾಗೂ ಇತರ ಪ್ರದೇಶಗಳನ್ನು ಸಂಪರ್ಕಿಸುವಂತಹ ರಸ್ತೆಗೆ ಸಣ್ಣ ಸೇತುವೆಯೊಂದನ್ನು ನಿರ್ಮಿಸಿಕೊಡಬೇಕೆಂದು ನಾಲ್ಕೈದು ವರ್ಷಗಳ ಹಿಂದೆ ಬೇಡಿಕೆಯನ್ನು ಪುತ್ತೂರು ನಗರಸಭೆಗೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಎರಡು ವರ್ಷಗಳ ಹಿಂದೆ ಸ್ಪಂದಿಸಿದ ನಗರಸಭೆಯ ಅಧಿಕಾರಿಗಳು ಸಿಂಗಾಣಿ ಸಮೀಪ ಸಣ್ಣ ಸೇತುವೆಯೊಂದರ ಕಾಮಗಾರಿಯನ್ನು ಅರಂಭಿಸಿದರು. ಕಾಮಗಾರಿ ಆರಂಭವಾಗುವಾಗಲೇ ಸೇತುವೆಗೂ, ರಸ್ತೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದ ಸ್ಥಳೀಯರು, ಬಳಿಕ ಕಾಮಗಾರಿ ಮುಗಿದ ಬಳಿಕ ಎಲ್ಲವೂ ಸರಿಯಾಗಬಹುದು ಎನ್ನುವ ಧೈರ್ಯದಲ್ಲೇ ಇದ್ದರು. ಆದರೆ ಸೇತುವೆ ಕಾಮಗಾರಿ ಮುಗಿದ ಬಳಿಕ ಸೇತುವೆ ಒಂದು ಕಡೆಯಾದರೆ, ರಸ್ತೆ ಇನ್ನೊಂದು ಕಡೆಯಾಗಿ ನಿರ್ಮಾಣವಾಗಿತ್ತು. ಇದೀಗ ರಸ್ತೆಯಿದೆ, ಸೇತುವೆ ಇದೆ ಆದರೆ ಎಲ್ಲವೂ ಇದ್ದರೂ, ಏನೂ ಪ್ರಯೋಜನವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಈ ಭಾಗದ ಜನರಿದ್ದಾರೆ.

gridgenon
ಮಂಜಲ್ಪಡು, ಸಿಂಗಾಣಿ, ಬಲ್ನಾಡು ಮೊದಲಾದ ಪ್ರದೇಶಗಳಿಗೆ ಅತೀ ಕಡಿಮೆ ಅಂತರದಲ್ಲಿ ಸಂಪರ್ಕ ಸಾಧಿಸುವ ಈ ರಸ್ತೆಯ ಸಿಂಗಾಣಿ ಎಂಬಲ್ಲಿ ಹಳ್ಳವೊಂದು ಹರಿಯುತ್ತಿದ್ದು, ಇದರಿಂದಾಗಿ ಮಳೆಗಾಲದಲ್ಲಿ ಈ ಭಾಗದ ಜನರಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ. ಈ ಕಾರಣಕ್ಕಾಗಿ ಈ ಹಳ್ಳಕ್ಕೊಂದು ಸೇತುವೆ ನಿರ್ಮಿಸುವ ಬೇಡಿಕೆಗೆ ನಗರಸಭೆ ಸ್ಪಂದಿಸಿದರೂ, ಇದೀಗ ಸೇತುವೆ ಈ ಭಾಗದ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಪುತ್ತೂರು ನಗರದ ಮಧ್ಯಭಾಗದಲ್ಲೇ ಇರುವಂತಹ ಈ ಪ್ರದೇಶ ಸಮರ್ಪಕ ರಸ್ತೆಯ ಸಂಪರ್ಕವಿಲ್ಲದ ಕಾರಣ ಅತೀ ಅಗತ್ಯ ಪರಿಸ್ಥಿತಿಗಳಲ್ಲಿ ಪರದಾಡುವಂತಹ ಸ್ಥಿತಿಯಲ್ಲೂ ಇದೆ. ಸೇತುವೆ ನಿರ್ಮಿಸಿದಾಗ ಬಹಳಷ್ಟು ಖುಷಿ ಪಟ್ಟಿದ್ದ ಸಿಂಗಾಣಿ ಹಾಗೂ ಇತರ ಆಸುಪಾಸಿನ ಜನರು ಇದೀಗ ಸೇತುವೆ ನಿರ್ಮಿಸಿದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.This post first appeared on V4news, please read the originial post: here

Share the post

ಪುತ್ತೂರು ಬಳಿ ಕಾಟಾಚಾರಕ್ಕೆ ನಿರ್ಮಾಣಗೊಂಡ ಸೇತುವೆ, ಸೇತುವೆಗೂ ರಸ್ತೆಗೂ ಸಂಬಂಧವಿಲ್ಲದಂತೆ ನಿರ್ಮಾಣ

×

Subscribe to V4news

Get updates delivered right to your inbox!

Thank you for your subscription

×