Get Even More Visitors To Your Blog, Upgrade To A Business Listing >>

ಕುಂಜತ್ತೂರು: ಮತ್ತೆ ಸ್ಪೋಟಕಗೊಂಡ ಸೆವನಪ್ ಬಾಟ್ಲಿಗಳು: ಕೂದಲೆಳೆ ಅಂತರದಿಂದ ತಪ್ಪಿದ ದುರಂತ: ಇನ್ನೂ ಎಚ್ಚೆತ್ತುಗೊಳ್ಳದ ಆರೋಗ್ಯಾಧಿಕಾರಿಗಳು

drinks-in-pet-bottles-pepsi-7-up-seven-up-diet-pepsi-tango-cadbury-agc110

drinks-in-pet-bottles-pepsi-7-up-seven-up-diet-pepsi-tango-cadbury-agc110

ಮಂಜೇಶ್ವರ ತಂಪು ಪಾನೀಯಗಳಾದ ಪೆಪ್ಸಿ ಸೆವನಪ್ ಬಾಟ್ಲಿಗಳು ಸ್ಪೋಟಕವಾಗುತ್ತಿರುವ ಸುದ್ದಿಗಳು ಒಮ್ಮೆಗೆ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರೂ ಬಳಿಕ ಯಾವೊಂದು ಪ್ರತಿಕ್ರಿಯೆ ಕೂಡಾ ಇಲ್ಲದೆ ಹಾಗೇಯೇ ತಣ್ಣಗಾಗಿ ಮತ್ತೆ ಮಾರುಕಟ್ಟೆಯಲ್ಲಿ ಮೊದಲಿನ ರೀತಿಯಲ್ಲಿಯೆ ರಾರಾಜಿಸುತಿತ್ತು.

ವ್ಯಾಪಾರಿಗಳು ಇದನ್ನು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಘಟನೆಯ ಬಗ್ಗೆ ಕಂಡೂ ಕಾಣದ ಜಾಣ ಕುರುಡುತನವನ್ನು ಪ್ರದರ್ಶಿಸಿರುವುದು ಇದೀಗ ದುರಂತಕ್ಕೊಂದು ದಾರಿ ಮಾಡಿ ಕೊಡುತ್ತಿರುವುದು ಮಾತ್ರವಲ್ಲದೆ ಪರೋಕ್ಷವಾಗಿ ಆರೋಗ್ಯಾಧಿಕಾರಿಗಳು ತಂಪು ಪಾನೀಯದ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿರುವುದಾಗಿ ವ್ಯಾಪಾರಿಗಳು ಆರೋಪಿಸುತಿದ್ದಾರೆ.

ಇದೀಗ ಇಂದು ಬಾನುವಾರ ಮುಂಜಾನೆ ಕುಂಜತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಾಧವ ಎಂಬವರ ಮಾಲಕತ್ವದಲ್ಲಿರುವ ಸ್ವಾಗತ್ ಹೋಟೆಲ್ ನ ಕ್ಯಾಶ್ ಕೌಂಟರ್ ನ ಸಮೀಪವೇ ಇರುವ  ಶೋ ಕೇಸಿನಲ್ಲಿ ಇಡಲಾಗಿದ್ದ ಸೆವನಪ್ ಬಾಟ್ಲಿಯೊಂದು ಸ್ಪೋಟಕವಾಗಿ ಗಾಜು ತುಂಡಾಗಿ ಹೊರಗೆ ರಟ್ಟಿದ ಘಟನೆ ನಡೆದಿದೆ. ಈ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ದುರಂತವೊಂದು ತಪ್ಪಿ ಹೋಗಿದೆ. ಈ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ತನಕ ತೂಮಿನಾಡು, ಮಂಜೇಶ್ವರ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡೆದಿದ್ದರೂ ಆರೋಗ್ಯ ಇಲಾಖೆ ಸ್ಥಳವನ್ನು ಕೂಡಾ ಸಂದರ್ಶಿಸಲಿಲ್ಲವೆಂಬ ಆರೋಪ ಕೂಡಾ ಇದೆ. ಯಾಕಾಗಿ ಈ ರೀತಿಯಾಗಿ ತಂಪುಪಾನೀಯದ ಬಾಟ್ಲಿಗಳು ಸ್ಪೋಟಕಗೊಳ್ಳುತ್ತಿವೆ ಇಂತಹ ಪ್ರಶ್ನೆಗಳನ್ನು ವ್ಯಾಪಾರಿಗಳು ವಿತರಕರಲ್ಲಿ ಪ್ರಶ್ನಿಸುತಿದ್ದರೂ ಯಾವುದೇ ನಿಖರವಾದ ಉತ್ತರ ಲಭಿಸಿಲ್ಲವೆಂಬುದಾಗಿ ಹೇಳಲಾಗಿದೆ. ಕೇಂದ್ರ ಸರಕಾರ ಕೆಲವೊಂದು ತಂಪು ಪಾನೀಯಗಳಲ್ಲಿ ವಿಷಾಂಶ ಇರುವ ಹಿನ್ನೆಲೆಯಲ್ಲಿ ಅಂತಹ ತಂಪು ಪಾನೀಯಗಳನ್ನು ಕುಡಿಯಬಾರದಾಗಿ  ಬಹಿರಂಗವಾಗಿ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ತಂಪು ಪಾನೀಯಗಳ ಬಾಟ್ಲಿಗಳು ಇದೀಗ ಭಾರೀ ಶಭ್ದದೊಂದಿಗೆ ಅಪಾಯಕಾರಿಯಾದ ರೀತಿಯಲ್ಲಿ ಸ್ಪೋಟಕಗೊಳ್ಳುತ್ತಿರುವುದು ಗ್ರಾಹಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸದೇ ಇದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗುವ ದಿನ ದೂರವಿರಲಾರದು.This post first appeared on V4news, please read the originial post: here

Share the post

ಕುಂಜತ್ತೂರು: ಮತ್ತೆ ಸ್ಪೋಟಕಗೊಂಡ ಸೆವನಪ್ ಬಾಟ್ಲಿಗಳು: ಕೂದಲೆಳೆ ಅಂತರದಿಂದ ತಪ್ಪಿದ ದುರಂತ: ಇನ್ನೂ ಎಚ್ಚೆತ್ತುಗೊಳ್ಳದ ಆರೋಗ್ಯಾಧಿಕಾರಿಗಳು

×

Subscribe to V4news

Get updates delivered right to your inbox!

Thank you for your subscription

×