Get Even More Visitors To Your Blog, Upgrade To A Business Listing >>

ಉತ್ತರ ಕನ್ನಡ ಜಿಲ್ಲಾ ಕಿವುಡರ ಸಂಘದ ಉದ್ಘಾಟನೆ

22bkl2-p1_fotor

ಉತ್ತರ ಕನ್ನಡ ಜಿಲ್ಲೆಯ ಸುಮಾರು 150 ಕಿವುಡ ಸದಸ್ಯರ ಸಹಯೋಗದಲ್ಲಿ ಹಲವಾರು ಉದ್ದೇಶದೊಂದಿಗೆ ಸ್ಥಾಪನೆಯಾಗಿದ್ದು, ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿವುಡರ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು

22bkl2-p1_fotor

capturevgf_fotor
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ ಮಾತನಾಡಿದ್ದು, ” ನಿಮ್ಮೆಲ್ಲರ ಕೋರಿಕೆಯಂತೆ ಜಿಲ್ಲೆಯಲ್ಲಿ ಸಂಘದ ಕಟ್ಟಡಕ್ಕೆ ಸಿಗಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಹಾಗೂ ಸರ್ಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸಮಾಜದಲ್ಲಿ ಕೆಲವರು ತಮ್ಮ ಕೈಯಲ್ಲಿ ಕೆಲಸ ಮಾಡಲು ಸಾಧ್ಯವಾದರು ಸಹ ಆಲಸ್ಯದಿಂದ ಜೀವನ ಸಾಗಿಸುತ್ತಾರೆ ಆದರೆ ನಿಮ್ಮಲ್ಲಿನ ಅಂಗವೈಕಲ್ಯವನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡು ಸಮಾಜದಲ್ಲಿ ನೀವು ಒಬ್ಬರು ಎನ್ನುವುದನ್ನು ತೋರಿಸಿಕೊಡುತ್ತಿರುವುದು ಸಂತಸ ವಿಚಾರವಾಗಿದೆ.” ಎಂದರು
ಭಟ್ಕಳ ಪ್ರಭಾರ ಸಹಾಯಕ ಆಯುಕ್ತ ರಮೇಶ ಕಳಸದ್ ಮಾತನಾಡಿದ್ದು, ” ಕಾನೂನಾತ್ಮಕ, ಶಾಸನಬದ್ದವಾಗಿ ಈಡೇರಲು ಈ ವೇದಿಕೆ ಅನೂಕೂಲವಾಗಬೇಕು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಿವುಡರಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯುವುದು. ಈ ಮೂಖಾಂತರವಾಗಿ ಶಿಕ್ಷಣ ಸಿಗುವಂತಾಗಬೇಕು. ಹೀಗೆ ಕಿವುಡರು ಸಹ ಸಮಾಜದಲ್ಲಿ ಎಲ್ಲಾ ರೀತಿಯಲ್ಲು ಬದುಕುವ ಅವಕಾಶವನ್ನು ಮಾಡಿಕೊಡಬೇಕಾಗಿರುವುದು ಸರ್ಕಾರದ ಕಾರ್ಯವಾಗಿದೆ. ಕಿವುಡರು ಸಲ್ಲಿಸಿರುವ ಹಲವಾರು ಬೇಡಿಕೆಗಳನುಸಾರವಾಗಿ ಒಂದೊಂದೇ ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕಾಗಿದೆ.” ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ ಡಿಕೋಸ್ತಾ, ಬಾಬು ಮೋಗೇರ ಹಾಗೂ ರಾಜ್ಯ ಕಿವುಡರ ಸಂಘದ ಅಧ್ಯಕ್ಷರು, ವಿವಿಧ ಜಿಲ್ಲಾ ಸಂಘಟನೆಯ ಪದಾಧಿಕರಿಗಳು, ದೇವಾಲಯದ ಧರ್ಮದರ್ಶೀಗಳು, ಬೆಂಗಳೂರಿನ ಕಿವುಡರ ಸಂಘದ ಸದಸ್ಯರು, ಜಿಲ್ಲೆಯ ಎಲ್ಲಾ ತಾಲೂಕಿನ ಕಿವುಡ ಸದಸ್ಯರು, ಸಂಘದ ತಾಲೂಕಾ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 23 ಜಿಲ್ಲೆಯಿಂದ 300 ಕ್ಕೂ ಅಧಿಕ ಕಿವುಡರು ಆಗಮಿಸಿದ್ದರು.

ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಉತ್ತರ ಕನ್ನಡ ಜಿಲ್ಲಾ ಕಿವುಡರ ಸಂಘದ ಉದ್ಘಾಟನೆ

×

Subscribe to V4news

Get updates delivered right to your inbox!

Thank you for your subscription

×