Get Even More Visitors To Your Blog, Upgrade To A Business Listing >>

ಈ ಬಾರಿಯು ಟಿಪ್ಪು ಜಯಂತಿ ಆಚರಿಸಲಿದ್ದೇವೆ: ಮಂಗಳೂರಿನಲ್ಲಿ ಐವನ್ ಡಿಸೋಜಾ ಪ್ರತಿಕ್ರಿಯೆ

ivan

ಟಿಪ್ಪು ಜಯಂತಿ ಸರಕಾರಿ ಘೋಷಿತ ಕಾರ್ಯಕ್ರಮವಾಗಿದ್ದು, ಇದು ಆರು ಕೋಟಿ ಕನ್ನಡಿಗರ ನಿರ್ಧಾರ. ಕೆಲವೊಂದು ಭಿನ್ನಾಭಿಪ್ರಾಯಗಳು ಇರುವುದು ಸಹಜ, ಆದರೆ ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುವುದು ಖಚಿತ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.

ಅವರು ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಟಿಪ್ಪು ಜಯಂತಿ ಆಚರಣೆ ವಿಚಾರಣೆ ಬಗ್ಗೆ ಮಾತನಾಡಿದರು. ಟಿಪ್ಪು ಜಯಂತಿ ಸರ್ಕಾರಿ ಘೋಷಿತ ಕಾರ್ಯಕ್ರಮ ಆಗಿದ್ದು, ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಮಾಡಲಿದ್ದೇವೆ ಎಂದರು.
ಅನಂತರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ವಿಚಾರದಲ್ಲಿ ಮಾತನಾಡಿದ ಅವರು, ಖಂಡನೆ ವ್ಯಕ್ತಪಡಿಸಿದರು. ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿರುವುದು ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಗುರುಗಳಿಗೆ ಹಲ್ಲೆ ನಡೆಸುವ ಸಂಸ್ಕೃತಿ ಆತಂಕಕಾರಿ ಎಂದು ವಿಷಾದ ವ್ಯಕ್ತಪಡಿಸಿದರು.
ವರದಿ: ಶರತ್ ಸಾಲ್ಯಾನ್ ಮಂಗಳೂರು



This post first appeared on V4news, please read the originial post: here

Share the post

ಈ ಬಾರಿಯು ಟಿಪ್ಪು ಜಯಂತಿ ಆಚರಿಸಲಿದ್ದೇವೆ: ಮಂಗಳೂರಿನಲ್ಲಿ ಐವನ್ ಡಿಸೋಜಾ ಪ್ರತಿಕ್ರಿಯೆ

×

Subscribe to V4news

Get updates delivered right to your inbox!

Thank you for your subscription

×