Get Even More Visitors To Your Blog, Upgrade To A Business Listing >>

ಶ್ರೀ ಕ್ಷೇತ್ರ ಗೋಕರ್ಣ ಸರಕಾರದ ವಶಕ್ಕೆ

Tags: agravesup

ವಧಂತಿಗಳಿಂದ ಕೆಲವು ವಿಚಾರಗಳು ಬೇರೆ ದಿಕ್ಕನ್ನು ಪಡೆಯುತ್ತದೆ. ಇದೇ ವ್ಯಾಪ್ತಿಯಲ್ಲಿ ಈಗ ಶ್ರೀ ಕ್ಷೇತ್ರ ಗೋಕರ್ಣವನ್ನು ಸರಕಾರ ವಶಕ್ಕೆ ಪಡೆಯುವುದಾಗಿ ಹಾಗೂ ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕಾತಿ ವಿಚಾರದ ಮಾತುಗಳು ಕೇಳಿ ಬಂದಿವೆ.


ಈ ಬಗ್ಗೆ ಶ್ರೀ ಮಠದ ಅಪ್ಪಟ ಭಕ್ತರಾದ ಭಟ್ಕಳ/ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ಎಸ್. ವೈದ್ಯ ಪ್ರತಿಕ್ರಿಯಿಸಿದ್ದು ಶ್ರೀ ಮಠ ಎನ್ನುವುದು ಒಂದು ಶಕ್ತಿಯಾಗಿದೆ. ಸಮಾಜ ಸರಿಯಾಗಬೇಕಾದರೆ ಇಂತಹ ಮಠದ ಅವಶ್ಯಕತೆ ಇದೆ. ಈ ಹಿಂದೆ ಗೋಕರ್ಣದಲ್ಲಿ ಕೆಲವೊಂದು ಅವ್ಯವಹಾರ ನಡೆದ ಬಗ್ಗೆ ಶ್ರೀಮಠದ ಗಮನಕ್ಕೆ ಬಂದಿದ್ದು, ಗೋಕರ್ಣ ಕ್ಷೇತ್ರದ ಹೆಸರು ಹಾಳಾಗಬಾರದು ಹಾಗೂ ಒಂದೊಳ್ಳೆ ಕ್ಷೇತ್ರ ಅಭಿವೃದ್ಧಿಯಲ್ಲಿರುವಾಗ ಈ ರೀತಿ ಸಮಸ್ಯೆಯಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ಶ್ರೀ ಮಠ ತನ್ನ ಆಡಳಿತಕ್ಕೆ ಪಡೆದಿತ್ತು. ಅಲ್ಲಿಂದ ಇಲ್ಲಿಯ ತನಕ ಶ್ರೀ ಮಠದ ಆಡಳಿತದ ಅವಧಿಯಲ್ಲಿ ಗೋಕರ್ಣ ಕ್ಷೇತ್ರ ಮತ್ತಷ್ಟು ಅಭಿವೃಧ್ಧಿಯತ್ತ ಸಾಗುತ್ತಿದೆ. ಇಂತಹ ಅಭಿವೃದ್ಧಿ ಕಾಣುತ್ತಿರುವ ಗೋಕರ್ಣ ಕ್ಷೇತ್ರವನ್ನು ಸರ್ಕಾರ ತನ್ನ ವಶಕ್ಕೆ ಹೇಗೆ ಪಡೆಯಲು ಸಾಧ್ಯ.? ಅಷ್ಟಕ್ಕೂ ಈ ಬಗ್ಗೆ ಉತ್ತರಕನ್ನಡ ಜಿಲ್ಲೆಯ ಶಾಸಕರನ್ನೊಳಗೊಂಡಂತೆ ಎಲ್ಲರೂ ಸರ್ಕಾರಕ್ಕೆ ಗೋಕರ್ಣ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ನಡುವೆ ಕೆಲವೊಂದು ವಧಂತಿಗಳಿಂದ ಗೋಕರ್ಣ ಕ್ಷೇತ್ರವನ್ನು ಹಾಗೂ ಶ್ರೀ ಮಠದ ಹೆಸರು ಕೆಡಿಸುವ ಕಾರ್ಯವಾಗುತ್ತಿದೆ. ಅತ್ಯಂತ ಪಾರದರ್ಶಕವಾದ ಆಡಳಿತ ವೈಖರಿಯಿಂದ ಗೋಕರ್ಣ ಕ್ಷೇತ್ರವನ್ನು ಈ ಹಿಂದೆ ನಡೆದಿದ್ದ ಅವ್ಯವಹಾರದ ಜಾಲದಿಂದ ಶ್ರೀ ಮಠ ಪಾರು ಮಾಡಿದೆ. ಗೋಕರ್ಣ ಕ್ಷೇತ್ರವನ್ನು ಸರ್ಕಾರ ವಶಕ್ಕೆ ಪಡೆಯುವ ಬಗ್ಗೆ ಯಾವುದೇ ಸರಕಾದ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಂದು ತಿಳಿಸಿದ್ದಾರೆ.
ಶ್ರೀ ಮಠದ ಭಕ್ತನಾಗಿಯೂ ಹಾಗು ಒಬ್ಬ ಜನಪ್ರತಿನಿಧಿಯಾಗಿಯೂ ಸಹ ಯಾವತ್ತು ಮಠದ ಪರವಾಗಿಯೇ ನಿಲ್ಲುತ್ತೇನೆ. ಸಮಾಜದಲ್ಲಿ ಒಂದೊಳ್ಳೆ ಕಾರ್ಯ ಮಾಡುತ್ತಿರುವ ಶ್ರೀಮಠಕ್ಕೆ ಯಾವುದೇ ರೀತಿಯಲ್ಲು ಅನ್ಯಾಯವಾಗಲು ನಾನು ಬಿಡುವುದಿಲ್ಲ. ಒಂದೊಮ್ಮೆ ಮಠದ ವಿರುದ್ದವೇನಾದರೂ ನಡೆದಲ್ಲಿ ನನ್ನ ಅಧಿಕಾರವನ್ನೇ ತ್ಯಜಿಸಲು ಸಿದ್ದ, ಹಾಗೂ ಸರಕಾರ ನನಗೆ ನೀಡಿರುವ ಎಲ್ಲಾ ವ್ಯವಸ್ಥೆಯನ್ನು ತೊರೆದು ಮಠದ ಪರವಾಗಿ ನಿಲ್ಲುತ್ತೇನೆ. ಅಧಿಕಾರಕ್ಕಿಂತ ಒಂದು ಸಮಾಜವನ್ನು ಹಾಗೂ ಪುಣ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ಶ್ರೀಮಠವೇ ದೊಡ್ಡದು.
ರಾಘವೇಂದ್ರ ಮಲ್ಯ ಭಟ್ಕಳ.This post first appeared on V4news, please read the originial post: here

Share the post

ಶ್ರೀ ಕ್ಷೇತ್ರ ಗೋಕರ್ಣ ಸರಕಾರದ ವಶಕ್ಕೆ

×

Subscribe to V4news

Get updates delivered right to your inbox!

Thank you for your subscription

×