Get Even More Visitors To Your Blog, Upgrade To A Business Listing >>

ಸೂಕ್ಷ್ಮ ಪ್ರದೇಶವಾದ ಭಟ್ಕಳದತ್ತ ಸಂಶಯದ ನೋಟ

ಸೆಕ್ಸ್ ದಾಸಿಯರು ಈ ಭೂಮಿಗಾಗಿ, ಕನ್ಯೆಯರು ಸ್ವರ್ಗಕ್ಕಾಗಿ’ ಎಂಬ ಮೂಲ ಅಸ್ತ್ರವನ್ನು ಇರಾಕಿ ಉಗ್ರ ಸಂಘಟನೆ ಈಗಲೂ ಬಳಸುತ್ತಿದೆ. ಭಾರತದಲ್ಲಿ ಐ.ಎಸ್.ಐ.ಎಸ್. ವಿರುದ್ಧದ ಕೇಸುಗಳನ್ನು ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಈ ಅಂಶವನ್ನು ಬಹಿರಂಗಪಡಿಸಿದೆ. ಎರಡು ದಿನಗಳ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ದಾಳಿ ನಡೆಸಿ, ಇರಾಕಿ ಉಗ್ರ ಸಂಘಟನೆಗೆ ನೆರವಾಗುತ್ತಿದ್ದ ೬ ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಬಂಧಿತ ವಿಚಾರಣೆ ವೇಳೆ ಬಾಯ್ಬಿಟ್ಟ ವಿಷಯಗಳು ಈಗ ಮತ್ತೊಮ್ಮೆ ಕರ್ನಾಟಕದ ಭಟ್ಕಳದತ್ತ ತಿರುಗಿ ನೋಡುವಂತೆ ಮಾಡಿವೆ. ಅಷ್ಟಕ್ಕೂ ಭಟ್ಕಳ ಮತ್ತೆ ಸುದ್ದಿಗೆ ಗ್ರಾಸವಾಗಲು ಕಾರಣವೇನು ಗೊತ್ತಾ? ಈ ವರದಿ ನೋಡಿ.


ಭಟ್ಕಳ ನಗರ ಭಯೋತ್ಪಾದನೆಯ ಮೂಲ ಕೇಂದ್ರವೆಂಬ ಹೆಸರನ್ನು ಈಗಾಗಲೇ ಪಡೆದಿದ್ದು, ಕೆಲವು ಉನ್ನತ ತನಿಖೆಗಳಿಂದ ಸಾಬೀತಾಗಿದೆ. ಈ ಮತ್ತೊಂದು ಭಾರಿ ವಿಚಾರದಲ್ಲಿ ಸುದ್ದಿಯಲ್ಲಿದ್ದು, ಸೆಕ್ಸ್ ದಾಸಿಯರ ನೇಮಕಾತಿ ವಿಷಯದಲ್ಲಿ ಭಟ್ಕಳ ಮೂಲದವರಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯಲ್ಲಿ ಈ ವಿಚಾರ ಭಟಾಬಯಲಾಗಿದೆ ಎನ್ನಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನಡೆಸಿದ ದಾಳಿಯ ಸಂಧರ್ಭದಲ್ಲಿ ೬ ಜನರನ್ನು ಬಂಧಿಸಿದ್ದು, ಇವರು ಇರಾಕಿ ಉಗ್ರ ಸಂಘಟನೆಗೆ ನೆರವಾಗಿದ್ದಾರೆ ಎನ್ನುವ ಕಾರಣ ಕೇಳಿ ಬಂದಿದೆ. ಈ ಆರು ಮಂದಿ ಯಾರ ಜತೆಗೆ ಸಂಪರ್ಕ ಹೊಂದಿದ್ದರು. ಹೇಗೆಲ್ಲ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಕಲೆ ಹಾಕಿದ್ದು, ಸೈಬರ್ ಲ್ಯಾಬಿನಿಂದ ಹೆಚ್ಚಿನ ವಿವರದ ಬಗ್ಗೆ ನಿರೀಕ್ಷೆಗಳಿವೆ. ಅದರಲ್ಲಿ ಭಟ್ಕಳದ ವಿಚಾರರವೂ ಬಂದಿದ್ದು, ಭಟ್ಕಳ ಮೂಲದ ಸುಲ್ತಾನ್ ಆರ್ಮಾರ್‌ನ ಸೋದರ ಶಫಿ ಆರ್ಮಾರ್ ಈ ಸೆಕ್ಸ್ ದಾಸಿಯರ ನೇಮಕಾತಿ ಹೊಣೆ ಹೊತ್ತಿದ್ದ ಎಂದು ತಿಳಿದು ಬಂದಿದೆ.
ಇಂಡಿಯನ್ ಮುಜಾಹಿದ್ದೀನ್‌ನಿಂದ ದೂರಾಗಿ ಅನ್ಸರ್ ಉಲ್ ತಾವ್ಹಿದ್ ಎಂಬ ನೇಮಕಾತಿ ಘಟಕ ಸ್ಥಾಪಿಸಿದ್ದ ಈತ, ಭಾರತದಿಂದ ಐ.ಎಸ್.ಐ.ಎಸ್.ಗೆ ನೇಮಕಾಗಿ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದ. ಇಲ್ಲಿಂದ ಆಯ್ಕೆಯಾದವರನ್ನು ನೇರವಾಗಿ ಸಿರಿಯಾ ಅಥವಾ ಇರಾಕ್ ನಲ್ಲಿರುವ ತರಬೇತಿ ಶಿಬಿರಗಳಿಗೆ ಕಳಿಸುವ ಹೊಣೆ ಈ ಸೋದರರು ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. ಈ ಹೋರಾಟದಲ್ಲಿ ನೀವು ಮಡಿದರೆ ಕನ್ಯೆಯರಿಗಾಗಿ ಸ್ವರ್ಗದಲ್ಲಿ ಉಳಿಯುತ್ತೀರಿ ಎಂದು ಬೋಧನೆ ಮಾಡಲಾಗುತ್ತಿತ್ತು. ಭಾರತದಿಂದ ಉಗ್ರ ಸಂಘಟನೆ ಸೇರುವವರಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡುವ ಭರವಸೆ ನೀಡಲಾಗುತ್ತಿತ್ತು ಎನ್ನಲಾಗುತ್ತಿದೆ. ಇನ್ನು ಇರಾಕಿ ಉಗ್ರ ಸಂಘಟನೆ ಐಎಸ್‌ಐಎಸ್ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರೇ ಖಚಿತಪಡಿಸಿದ್ದಾರೆ. ಇಷ್ಟಕ್ಕೂ ದಕ್ಷಿಣ ಭಾರವನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡಿರುವುದೇಕೆ?! ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮುಸ್ಲಿಂ ಯುವಕರನ್ನು ಸಂಘಟನೆಯತ್ತ ಸೆಳೆಯುವಲ್ಲಿ ಐಸಿಸ್ ತಕ್ಕಮಟ್ಟಿನ ಪ್ರಯತ್ನ ಮಾಡಿದೆ. ಹೀಗಾಗಿ, ಸ್ಥಳೀಯ ಮೂಲಭೂತವಾದಿ ಸಂಘಟನೆಗಳಾದ ಸಿಮಿ, ಇಂಡಿಯನ್ ಮುಜಾಹೀದ್ದೀನ್ ನಂತರ ಈಗ ಐ.ಎಸ್.ಐ.ಎಸ್. ಭೀತಿ ಎದುರಾಗಿದೆ. ಆದರೆ ಈ ಬಗ್ಗೆ ರಾಜ್ಯಗಳು ಕೇಂದ್ರಕ್ಕೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇಸ್ಲಾಮಿಕ್ ಉಗ್ರರು ದೇಶದಲ್ಲಿ ಯಾವುದೇ ವೇಳೆ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಇನ್ನೊಂದು ಆತಂಕದ ವಿಚಾರವೆನೆಂದರೆ ಐ.ಎಸ್.ಐ.ಎಸ್. ಸಂಘಟನೆ ಸೇರೋದ್ರಲ್ಲಿ ಕರ್ನಾಟಕದವರೇ ಫಸ್ಟ್ ಎನ್ನುವ ಮಾತು ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಭಟ್ಕಳ ಎನ್ನುವ ಹೆಸರು ಸಂಪೂರ್ಣ ಎಲ್ಲಾ ರೀತಿಯಲ್ಲು ಸುದ್ದಿಯಲಿದ್ದು, ಈ ಸೆಕ್ಸ್ ದಾಸಿಯರ ನೇಮಕಾತಿ ವಿಷಯ ಇನ್ನೊಂದು ಸೇರ್ಪಡೆಯಾಗಿದೆ ಎನ್ನಬಹುದಾಗಿದೆ.

ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಸೂಕ್ಷ್ಮ ಪ್ರದೇಶವಾದ ಭಟ್ಕಳದತ್ತ ಸಂಶಯದ ನೋಟ

×

Subscribe to V4news

Get updates delivered right to your inbox!

Thank you for your subscription

×