Get Even More Visitors To Your Blog, Upgrade To A Business Listing >>

ಕುಂದಾಪುರ: ಅಸೋಡು ನಂಧೀಕೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಕಳ್ಳತನ

uk-3

ಅಸೋಡು ದೇವಸ್ಥಾನ ಸೇರಿದಂತೆ ಕುಂದಾಪುರದ ಪ್ರತ್ಯೇಕ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದಲ್ಲಿ ಕಳ್ಳತನ ನಡೆಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಕಳ್ಳರ ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.uk-1

uk-2

uk-4

uk-5

uk-6ಕುಂದಾಪುರ ತಾಲ್ಲೂಕಿನ ಅಸೋಡು ಬೆಂಕಿಕಾನ್ ಶ್ರೀ ನಂದಿಕೇಶ್ವರ ದೇವಸ್ಥಾನ, ಬಸ್ರೂರು ಸಮೀಪದ ಬಿ.ಎಚ್. ಎಂಬಲ್ಲಿನ ಮೊಬೈಲ್ ಅಂಗಡಿ ಹಾಗೂ ಆನಗಳ್ಳಿಯ ಮತಾ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಸೋಡು ದೇವಸ್ಥಾನದ ಹಿಂಬದಿ ಶಟರ್ ಮುರಿದು ಒಳನುಗ್ಗಿದ ಕಳ್ಳರು ದೇವಸ್ಥಾನದಳ್ಳಿದ್ದ ಬೆಳ್ಳಿಯ ಪ್ರಭಾವಳಿ ಹಾಗೂ ಗರ್ಭಗುಡಿಯ ಬಾಗಿಲಿಗೆ ಅಳವಡಿಸಿದ್ದ ಬೆಳ್ಳಿಯ ಕವಚವನ್ನು ಕಡ್ಡೊಯ್ದಿದ್ದಾರೆ. ಇನ್ನು ದೇವಸ್ಥಾನದ ಸಮೀಪದ ಆಪೀಶ್ ಕೋಣೆಯ ಬೀಗ ಒಡೆದು ಅದರಲ್ಲಿದ್ದ ಸಿ.ಸಿ. ಕ್ಯಾಮೆರದ ಡಿ.ವಿ.ಆರ್. ಕದ್ದೊಯ್ದಿದ್ದಲ್ಲದೇ ದೇವಸ್ಥಾನದ ಹೊರಭಾಗದಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮೆರಾಗಳನ್ನು ಕೊಂಡುಹೋಗಿದ್ದಾರೆ.ಇನ್ನು ಕುಂದಾಪುರದ ಬಸ್ರೂರು ಸಮೀಪದ ಬಿ.ಎಚ್ ಬಳಿಯಿದ್ದ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಕಂಪ್ಯೂಟರ್ ಸಮೇತ ಟೇಬಲ್ ಹಾಗೂ 7 ಮೊಬೈಲ್ ಫೋನುಗಳನ್ನು ಕಳವುಗೈದಿದ್ದಾರೆ. ಮೊಬೈಲ್ ಅಂಗಡಿಯು ಕಂಡ್ಲೂರು ತೆರಳುವ ಮುಖ್ಯ ರಸ್ತೆ ಸನೀಹವೇ ಇದ್ದು ಅಂಗಡಿಯ ಬೀಗ ಒಡೆದು ಕಳ್ಳತನ ನಡೆಸಲಾಗಿದೆ.

ಕುಂದಾಪುರದ ಆನಗಳ್ಳಿಯ ಶ್ರೀ ಮಾತಾ ಇಲೆಕ್ಟ್ರಿಕಲ್ಸ್ ಅಂಗಡಿಯ ಬೀಗ ಒಡೆದ ಕಳ್ಳರು ಒಳಗಿದ್ದ ಮಾರಾಟಕ್ಕಾಗಿ ಇಡಲಾದ ಫ್ಯಾನ್ ಸೇರಿದಂತೆ ವಿವಿಧ ಉಪಕರಣಗಳನ್ನು ಹಾಗೂ 35 ಸಾವಿರ ನಗದನ್ನು ದೋಚಿದ್ದಾರೆ. ಈ ಎಲ್ಲಾ ಘಟನೆಗಳು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಡಿವೈ‌ಎಸ್ಪಿ ಪ್ರವೀಣ ನಾಯಕ್, ಪ್ರಭಾರ ವ್ರತ್ತನಿರೀಕ್ಷಕ ರಾಘವ್ ಪಡೀಲ್, ಕುಂದಾಪುರ ಎಸ್.ಐ. ನಸೀರ್ ಹುಸೇನ್, ಕ್ರೈಮ್ ವಿಭಾಗದ ಎಸ್.ಐ. ದೇವರಾಜ್ ಮೊದಲಾದವರು ಭೇಟಿ ನೀಡಿದ್ದಾರೆ. ಕಳ್ಳತನ ನಡೆದ ಮೂರು ಸ್ಥಳಗಳಿಗೆ ಬೆರಳಚ್ಚು ತಜ್ನರು ಭೇಟಿನೀಡಿದ್ದು ತನಿಖೆ ಚುರುಕುಗೊಳಿಸಲಾಗಿದೆ.

ವರದಿ: ಸಂತೋಷ್, ಉಡುಪಿThis post first appeared on V4news, please read the originial post: here

Share the post

ಕುಂದಾಪುರ: ಅಸೋಡು ನಂಧೀಕೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಕಳ್ಳತನ

×

Subscribe to V4news

Get updates delivered right to your inbox!

Thank you for your subscription

×