Get Even More Visitors To Your Blog, Upgrade To A Business Listing >>

ಬೆಳ್ತಂಗಡಿ: ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

crimetapesmall

ಬೆಳ್ತಂಗಡಿ ತಾಲುಕಿನ ವೇಣೂರು ಗ್ರಾಮದಲ್ಲಿ ಇರುವ ಕುಂಭಾಶಿ ಆಂಗ್ಲ ಮಾಧ್ಯಮ ಹೈಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ಕು.ಚಿಟ್ಟಿ ಎಂಬ ಬಾಲಕಿಗೆ ಶಾಲೆಯಲ್ಲಿ ಮುಖ್ಯ್ ಶಿಕ್ಷಕ ಮಾರಣಾಂತಿಕ ದೈಹಿಕ ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ.
ಬಾಲಕಿಯ ತಲೆಗೆ ಹೊಡೆದಿದ್ದು ಗಂಭೀರ ಗಾಯವಾಗಿದ್ದು 5 ಹೊಲಿಗೆಗಳನ್ನು ಹಾಕಲಾಗಿದೆ, ಕೈ ಹೊಡೆದಿದ್ದು ಕೈ ರಕ್ತ ಹೆಪ್ಪುಗಟ್ಟಿ ಕಪ್ಪಗೆ ಆಗಿರುತ್ತದೆ.ಬಾಲಕಿಯ ಮೇಲೆ ಇದಕ್ಕಿಂತ ಮುಂಚೆನು 3 ಸಲ ಇಚೆ ರೀತಿ ಹಲ್ಲೆ ಮಾಡಲಾಗಿದ್ದು ಅವಗ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯ ಮಾಡಲಾಗಿತ್ತು. ಇದರಿಂದ ಬಾಲಕಿ ದೈಹಿಕವಾಗಿ ಬೇರೆ ತರದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.
ಬಾಲಕಿಯು ಪ್ರಸ್ತುತ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.
ಬಾಲಕಿಯು ಹೆತ್ತವರು ಮೂಲತ ಕೆರಳ ರಾಜ್ಯದವರಾಗಿದ್ದು ಖನ್ನದ ಮಾತನಾಡಲು ಬಾರದೆ ಯಾವ ರೀತಿಯಲ್ಲಿ ಇದರ ವಿರುದ್ದ ಹೋರಾಡಬೇಕು ಎಂದು ಗೊತ್ತಾಗದೆ ಕಂಗಲಾಗಿದ್ದಾರೆ. ಅದು ಅಲ್ಲದೆ ಬಾಲಕಿಯ ಹೆತ್ತವರು ಆರ್ಥಿಕವಾಗಿ ಬಡವರಾಗಿದ್ದಾರೆ.ಈ ಬಾಲಕಿ ಆದೆ ಶಾಲೆಯ ಆಡಳಿತ ಮಂಡಳಿ ನಡೆಸುವ ಹಾಸ್ಟೇಲ್ ನಲ್ಲಿ ಉಳಿದುಕೊಂಡು ಕಲಿಯುತ್ತಿದ್ದಳು ಎಂದು ತಿಳಿದು ಬಂದಿರುತ್ತದೆ ಹಾಗೂ ಈ ಹಾಸ್ಟೇಲ್ ನಲ್ಲಿ ಸಹ ಈ ಬಾಲಕಿಗೆ ಮತ್ತು ಞೆರೆ ಮಕ್ಕಳಿಗೆ ಕೂಡ ಈ ತರದ ದೈಹಿಕ ಹಲ್ಲೆ ಹಲವು ಸಲ ನಡೆದಿರುವ ಬಗ್ಗೆ ತಿಳಿಸಿರುತ್ತಾರೆ.
ಪ್ರಸ್ತುತ ಇವಾಗ ನಡೆದಿರುವ ಬಗ್ಗೆ ಚೈಲ್ಡ್ ಲೈನ್ ಮಂಗಳೂರು-1098 ಮುಖಾಂತರ ವೇಣೂರ್ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಬಾಲಕಿಯ ಹೆಳಿಕೆಯನ್ನು ಪಡೆದುಕೊಂಡು ದೂರು ದಾಖಲಿಸುವಂತೆ ಪೋಲಿಸರಿಗೆ ಮಾಹಿತಿ ನೀಡಿರುತ್ತೇವೆ.
ಈ ಘಟನೆಯು ದಿನಾಂಕ 24/09/2016 ರಂದು ಘಟಿಸಿರುತ್ತದೆ ಆದರೆ ಚೈಲ್ಡ್ ಲೈನ್ ಮಂಗಳೂರು-1098ಕ್ಕೆ ದಿನಾಂಕ 25/09/2016ರಂದು ಮಾಹಿತಿ ಬಂದಿರುತ್ತದೆ.



This post first appeared on V4news, please read the originial post: here

Share the post

ಬೆಳ್ತಂಗಡಿ: ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

×

Subscribe to V4news

Get updates delivered right to your inbox!

Thank you for your subscription

×