Get Even More Visitors To Your Blog, Upgrade To A Business Listing >>

ಉಡುಪಿ : ತೆನೆ ಹಬ್ಬ ಸಂಭ್ರಮ

Tags: agravesup

vlcsnap-2016-09-08-15h16m28s49 copy

ಮಕ್ಕಳ ಕೈಯಲ್ಲಿ ಬಗೆಬಗೆಯ ಹೂವುಗಳು, ಭತ್ತದ ತೆನೆಯನ್ನು ಹಿಡಿದು ಪೂಜಿಸುತ್ತಿರುವ ಕ್ರೈಸ್ತ ಬಾಂಧವರು, ಮಹಿಳೆಯರ ಕೈಯಲ್ಲಿ ಕಬ್ಬು.. ಇದು ಕರಾವಳಿ ಜಿಲ್ಲೆಯಾದ್ಯಂತ ಮೇರಿ ಮಾತೆಯ ಜನ್ಮ ದಿನದ ಪ್ರಯುಕ್ತ ನಡೆಯುವ ತೆನೆ ಹಬ್ಬದ ದೃಶ್ಯ.. ಮೇರಿ ಮಾತೆಯ ಜನುಮದಿನವನ್ನು ತೆನೆ ಹಬ್ಬದ ಮೂಲಕ ಕ್ರೈಸ್ತ ಬಾಂಧವರು ಭಕ್ತಿ, ಭಾವದಿಂದ ಆಚರಿಸ್ಕೊಂಡರು.vlcsnap-2016-09-08-15h15m11s44 copy

vlcsnap-2016-09-08-15h15m23s164 copy

vlcsnap-2016-09-08-15h15m31s243 copy

vlcsnap-2016-09-08-15h15m44s122 copy

vlcsnap-2016-09-08-15h15m51s188 copyಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರ ಪವಿತ್ರ ಹಬ್ಬ ಮೋಂತಿ ಫೆಸ್ಟ್ ಅಥವಾ ತೆನೆ ಹಬ್ಬ ಸಂಭ್ರಮದಿಂದ ಸಂಪನ್ನಗೊಂಡಿದೆ. ಮೇರಿ ಮಾತೆಯ ಜನುಮ ದಿನ ಮತ್ತು ಹೊಸ ಬೆಳೆಯ ಹಬ್ಬವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ ನಲ್ಲಿ ಈ ಹಬ್ಬವನ್ನು ಸಂಬ್ರದಿಂದ ಆಚರಿಸಲಾಯಿತು… ಭತ್ತದ ಹೊಸ ಬೆಳೆ ಬಂದಾಗ ಅದನ್ನು ರೈತರು ಹೊಸ ಬೆಳೆಯ ಹಬ್ಬವಾಗಿ ಆಚರಿಸುವದು ಕರಾವಳಿಯ ಸಂಪ್ರದಾಯ. ಇದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿರದೇ ಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರು ಕೂಡಾ ಈ ಹೊಸ ಹಬ್ಬವನ್ನು ಸಂಬ್ರದಿಂದ ಆಚರಿಸಿಕೊಳ್ಳುತ್ತಾರೆ. ಸೆ ೮ ಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರಿಗೆ ಪವಿತ್ರ ದಿನ. ಕನ್ಯಾ ಮರಿಯಮ್ಮರ ಜನ್ಮ ದಿನವಾದ ಇಂದು ಈ ದಿನದಲ್ಲಿ ಹೊಸ ಬೆಳೆಯನ್ನು ಚರ್ಚ ಗೆ ತಂದು ಪೂಜೆ ಮಾಡಲಾಗುತ್ತದೆ. ಬಳಿಕ ಮನೆಗೆ ಕೊಂಡೊಯ್ದು ಹಬ್ಬ ಆಚರಿಸುತ್ತಾರೆ.
ಮೋಂತಿ ಫೇಸ್ಟ್ ಎಲ್ಲರ ಹಬ್ಬ. ಮಕ್ಕಳು ಮಹಿಳೆಯರು ಕುಟುಂಬ ಎಲ್ಲ ಜನರು ಇದರಲ್ಲಿ ಭಾಗವಹಿಸುತ್ತಾರೆ. ಮಕ್ಕಳು ಹೂವುಗಳನ್ನು ಸಂಗ್ರಹಿಸಿ ಈ ದಿನದಂದು ಚರ್ಚ ಗೆ ತಂದು ಮಾತೆ ಮೇರಿಗೆ ಅರ್ಪಿಸುತ್ತಾರೆ. ಇದನ್ನು ನೋವೇನಾ ಎಂದು ಹೇಳುತ್ತಾರೆ. ಇದರ ಜೊತೆಗೆ ಕಬ್ಬುಗಳನ್ನು ಕೂಡಾ ಅರ್ಪಿಸುವದುಂಟು. ಮದರ್ ಆಪ್ಸ್ ಸಾರೋಸ್ ಚರ್ಚ್ ನಲ್ಲಿ ತೆನೆ ಹಬ್ಬವನ್ನು ಇಟ್ಟು ಪೂಜೆ ಮಾಡಲಾಯಿತು. ಫಾದರ್ ಪ್ರೆಡ್ ಮಸ್ಕರೇನಸ್ ದಿವ್ಯ ಬಲಿ ಪೂಜೆ ಸಮರ್ಪಿಸಿದರು. ಇದೇ ಸಂದರ್ಬ ವಿಶೇಷ ಪ್ರಾರ್ಥನೆಗಳು ನಡೆದವು. ತೆನೆ ಹಾಗೂ ಕಬ್ಬನ್ನು ಮತ್ತೆ ಮನೆಗೆ ತೆಗೆದುಕೊಂಡು ಹೋಗಿ ಮನೆಯಲ್ಲಿ ಸಂಬ್ರಮದಿಂದ ಹೊಸ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಕ್ರೈಸ್ತರು ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ.
ಒಟ್ಟಿನಲ್ಲಿ ಕರಾವಳಿಯ ಕ್ರೈಸರು ಇಂದು ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ತೆನೆ ಹಬ್ಬ ಬರೀ ಹಿಂದೂಗಳಿಗೆ ಮಾತ್ರ ಸೀಮಿತ ಅಲ್ಲ. ಕ್ರೈಸ್ತರಲ್ಲೂ ಈ ಆಚರಣೆ ನಡೆತಾ ಇದೆ. ಈ ಮೂಲಕ ಪ್ರಕೃತಿಯ ಪೂಜೆ ನಡೆಯುತ್ತಿದೆ ಎಂದರೆ ತಪ್ಪಾಗಲಾರದು..
ವರದಿ: ಸಂತೋಷ್ ಸರಳೇಬೆಟ್ಟು, ಉಡುಪಿ



This post first appeared on V4news, please read the originial post: here

Share the post

ಉಡುಪಿ : ತೆನೆ ಹಬ್ಬ ಸಂಭ್ರಮ

×

Subscribe to V4news

Get updates delivered right to your inbox!

Thank you for your subscription

×