Get Even More Visitors To Your Blog, Upgrade To A Business Listing >>

ಅವರೇಕಾಳು ರೈಸ್

ಭಾನುವಾರದ ರಜೆ ಮೂಡ್‌ನಲ್ಲಿರುವ ನಮಗೆ ರುಚಿಕರ ಊಟ ಮತ್ತು ವಾರದ ದಣಿವು ಕಳೆಯಲು ಮನೋರಂಜನೆ ಇಲ್ಲದಿದ್ದರೆ ಅದು ವಾರದ ರಜೆ ಎನಿಸಿಕೊಳ್ಳುವುದಿಲ್ಲ. ಆದರೆ ಪ್ರತಿ ವಾರ ಹೋಟೆಲ್‌ಗಳಿಗೆ ಹೋಗುವುದೆಂದರೆ ಖರ್ಚು ಹೆಚ್ಚು ಜತೆಗೆ ಆರೋಗ್ಯದ ಚಿಂತೆ ಬೇರೆ. ಆದ್ದರಿಂದ ಮನೆಯಲ್ಲೇ ಸರಳ ಹಾಗೂ ರುಚಿಕರ ರೆಸಿಪಿಗಳು ಗೊತ್ತಿದ್ದರೆ ಚೆನ್ನ ಎಂಬುದು ಹಲವರ ಬಯಕೆ. ಚಿಂತೆ ಬಿಡಿ ಕಡಿಮೆ ಸಮಯದಲ್ಲೇ ರುಚಿಕರ ರೆಸಿಪಿ ತಯಾರಿಸಿ, ಇಲ್ಲಿದೆ ಭಾನುವಾರದ ವಿಶೇಷ ರೆಸಿಪಿ.




ಅವರೇಕಾಳು ರೈಸ್ 


ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಇಷ್ಟವಾಗುವ ರೆಸಿಪಿ ಅವರೇಕಾಳು ರೈಸ್. ಊಟ ಮಾಡುವಾಗ ಹಿತವೆನಿಸುತ್ತದೆ. ಈಗ ಅವರೇಕಾಯಿ ಸೀಜನ್ ಇದ್ದು, ಮನೆಯಲ್ಲೇ ಈ ಭಾನುವಾರಕ್ಕೆ ರುಚಿಕರ ರೆಸಿಪಿ ತಯಾರಿಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿ  


ಅವರೇಕಾಳು -ಅರ್ಧ ಲೋಟ
ಅಕ್ಕಿ-  ಒಂದು ಲೋಟ
ತುಪ್ಪ- ಅರ್ಧ ಕಪ್‌ಗಿಂತ ಕಡಿಮೆ
ಕೆನೆ ಮೊಸರು-ಅರ್ಧ ಕಪ್‌ಗಿಂತ ಕಡಿಮೆ
ಬಾದಾಮಿ-ಅರ್ಧ ಕಪ್‌ಗಿಂತ ಕಡಿಮೆ
ಹಾಲು-ಅರ್ಧ ಕಪ್‌ಗಿಂತ ಕಡಿಮೆ
ದ್ರಾಕ್ಷಿ ಹಾಗೂ ಗೋಡಂಬಿ- ಅರ್ಧ ಕಪ್‌ಗಿಂತ ಕಡಿಮೆ
ಕೇಸರಿ-ಅಗತ್ಯಕ್ಕೆ ತಕ್ಕಷ್ಟು
ಸ್ಪಲ್ಪ ಚೆಕ್ಕೆ
ಸ್ಪಲ್ಪ ಲವಂಗ
ಸ್ಪಲ್ಪ ಶುಂಠಿ, ಮೆಣಸಿನಕಾಯಿ, ಗಸಗಸೆ, ಏಲಕ್ಕಿ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಹೀಗೆ ಮಾಡಿ: ಮೆಣಸಿನಕಾಯಿ, ಗಸಗಸೆ, ಏಲಕ್ಕಿ, ಶುಂಠಿಯನ್ನು ಸಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಚಕ್ಕೆ, ಲವಂಗ, ದ್ರಾಕ್ಷಿ, ಗೋಡಂಬಿ, ರುಬ್ಬಿದ ಮಸಾಲೆ ಹಾಗೂ ಅಕ್ಕಿ ಹಾಕಿ ಸ್ಪಲ್ಪ ಸಮಯ ಪ್ರೈ ಮಾಡಬೇಕು. ನಂತರ ಹಾಲಲ್ಲಿ ನೆನಸಿದ ಕೇಸರಿ ಎಸಳು, ಮೊಸರು, ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಬೇಕು. ವಿಷಲ್ ಕೂಗಿದ ನಂತರ ತೆಗೆದರೆ ಈ ಭಾನುವಾರಕ್ಕೆ ಅವರೇಕಾಳು ರೈಸ್ ಸವಿಯಲು ಸಿದ್ಧ.



This post first appeared on Kannada Tips, please read the originial post: here

Share the post

ಅವರೇಕಾಳು ರೈಸ್

×

Subscribe to Kannada Tips

Get updates delivered right to your inbox!

Thank you for your subscription

×