Get Even More Visitors To Your Blog, Upgrade To A Business Listing >>

[ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !


ಆರೋಗ್ಯ ರಕ್ಷಣೆಯಂತೆ ಪರಿಸರ ಸಂರಕ್ಷಣೆ ಇಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಮನುಷ್ಯನ ಪರಿಸರ ವಿರೋಧಿ ಚಂತನೆ ಇದಕ್ಕೆ ಮುಖ್ಯ ಕಾರಣ. ಈಗ ಸವಾಲು ಎದುರಿಸಲು ನಮಗಿರುವ ಏಕೈಕ ಮಾರ್ಗವೆಂದರೆ ಪರಸರಿ ಸಂಪತ್ತಿನ ರಕ್ಷಣೆ ಮಾಡುವುದು. ಪರಿಸರ ಮಾಲಿನ್ಯದ ತಡೆ ಜೊತೆಗೆ ಆರೋಗ್ಯಯುವ ಬದುಕು ಕಲ್ಪಿಸುವ ವೃಕ್ಷಗಳಲ್ಲಿ ಬೇವಿಗೆ (ಬೇವು-neem) ಮೊದಲ ಹೆಸರು. (health benefits of neem in kannada)




# ಬೇವಿನ ಉಪಯೋಗ 1). ಗುಣದಿಂದ ಬೇವು ಕಲ್ಪವೃಕ್ಷ !


ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಮುಂದಿರುತ್ತದೆ.

ವೇದ ಸಾಹಿತ್ಯದಲ್ಲಿ ಬಹುವಾಗಿ ಉಲ್ಲೇಕಿತವಾಗಿರುವ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.

# ಬೇವಿನ ಉಪಯೋಗ 2). ಹಲವು ರೋಗಗಳಿಗೆ ಮದ್ದು ಬೇವು 





ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.
ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕಿಮಿನಾಶಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.

ಕಡಿಮೆ ಮಳೆ ಬೀಲುವ ಮತ್ತು ಬಿಸಿಲಿನ ತಾಪ ಅಧಿವಾಗಿರುವ ಪ್ರದೇಶದಲ್ಲಿ ಬೇವಿನ ಮರ ಹುಸುಸಾಗಿ ಬೆಳೆಯುತ್ತವೆ. ಇಂದು ಪ್ರಕೃತಿ ವಿಶೇಷ. ಬೇವಿನ ಮರಗಳ ಮೇಲಿಂದ ಬೀಸುವಗಾಳಿಯು ಬಿಸಿಲಿನ ತಾಪಂದಿಂದ ಬಳಲಿದ ದೇಹಕ್ಕೆ ತಂಪು ನೀಡುತ್ತದೆ. ಇದು ಆರೋಗ್ಯಕರ ಕೂಡ ಹೌದು.

ಇದನ್ನು ಓದಿ:  ಕುಂಬಳಕಾಯಿ ಮಹಿಮೆ ಬಲ್ಲಿರೇನು ?

# ಬೇವಿನ ಉಪಯೋಗ 3). ಬೇವಿನಿಂದ ಮಲೇರಿಯಾ ದೂರ !






ಬೇವಿನ ಸೊಪ್ಪು, ಬೇವಿನ ಹೋವು, ಬೇವಿನ ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅಂಬೋಣ.

ಬೇವಿನ ಮರದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ರೋಗಾದಿ ಚರ್ಮ ರೋಗಗಳು ನಿವಾರಣೆಯಾಗುವುವು. ಮಧುಮೇಹ, ನಿಶ್ಯಕ್ತಿ, ವಾಕರಿಕೆ, ಬಾಯಾರಿಕೆ, ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ.


ಮಲೇರಿಯಾ ಜ್ವರದಲ್ಲಿ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲೀ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃಧ್ಧಿಸುತ್ತದೆ.

ಸೀಮೆಎಣ್ಣೆಯೊಂದಿಗೆ ಬೇವಿನ ಎಣ್ಣೆ ಬೆರೆಸಿ ದೀಪ ಉರಿಸುವುದರಿಂದ ಸೊಳ್ಳೆಗಳ ಕಾಟ ತಪ್ಪಿಸ ಬಹುವುದು. ದ್ವಿಶತಾಂಶ ಬೇವಿನ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಲೇಪಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.
ಬೇವಿನ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಆಮಾತಿಸಾರ (dysentery) ಮತ್ತು ಅತಿಸಾರ (diarrhoea) ದಿಂದ ಗುಣಮುಖವಾಗಬಹುದು. ಪ್ರತಿದಿನ ಬೆಳಗ್ಗೆ 10-12 ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚನ್ನಾಗಿ ಅಗೆದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತವೆ ಎಂಬುದು ಹಿರಿಯರ ಅಭಿಪ್ರಾಯ.

ಇದನ್ನು ಓದಿ: ಆರೋಗ್ಯಕರ ಆಹಾರಗಳು


# ಬೇವಿನ ಉಪಯೋಗ 4). ಕಹಿ ಬೇವು ಗುಣದಲ್ಲಿ ಅಮೃತ ! 


ಒಟ್ಟಾರೆ ಬೇವು ಗುಣದಲ್ಲಿ ಕಹಿ ಎನಿಸಿದರೂ ಅದರ ಉಪಯೋಗದಲ್ಲಿ ಮಾತ್ರ ಅಮೃತ. ಬೇವು ಅಂದಕೂಡಲೇ ನಾವು ಮುಖ ಸಿಂಡರಸಿಕೊಳ್ಳುತ್ತೆವೆ. ಆದರೆ ಬೇವಿನ ಉಪಯೋಗ ಅರಿತು ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಆರೋಗ್ಯಯುತ ಜೀವನ ನಡೆಸಬಹುದು ಎಂಬುದು ನಮ್ಮ ಪೂರ್ವಜರ ಸಲಹೆ.

-ಸಂಗ್ರಹ

ಆರೋಗ್ಯ, ಆಹಾರ, ಜೀವನಶೈಲಿ ಕುರಿತು kannadatips.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ [email protected]  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips #healthtips 


This post first appeared on Kannada Tips, please read the originial post: here

Share the post

[ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !

×

Subscribe to Kannada Tips

Get updates delivered right to your inbox!

Thank you for your subscription

×