Get Even More Visitors To Your Blog, Upgrade To A Business Listing >>

ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯ ಬಳಕೆ - Halatu Honnu




ನಿಸ್ತಂತುವಿನಲ್ಲಿ ಕನ್ನಡವನ್ನು ಬಳಸಲು ಅನೇಕ ಮಾರ್ಗಗಳಿವೆ. ಈ ಲೇಖನದಲ್ಲಿ ಗೂಗಲ್ ಇಂಡಿಕ್ ಕೀಬೋರ್ಡ್ ಬಳಸಿಕೊಂಡು ಕನ್ನಡದಲ್ಲಿ ಹೇಗೆ ಬರೆಯಬಹುದು ಎಂದು ವಿವರಿಸಲಾಗಿದೆ.


ಒಂದುವೇಳೆ ನಿಮ್ಮ ನಿಸ್ತಂತುವಿ(ಮೊಬೈಲ್)ನಲ್ಲಿ ಗೂಗಲ್ ಇಂಡಿಕ್ ಕೀಬೋರ್ಡ್ ಇಲ್ಲದಿದ್ದರೆ ಅಥವಾ ಅದರ ಸಂರಚನೆಯ(ಕಾನ್ಫಿಗರೇಷನ್)ನ್ನು ಮಾಡಿಲ್ಲದಿದ್ದರೆ ದಯವಿಟ್ಟು ಮೊದಲು ಅದನ್ನು ಅನುಸ್ಥಾಪಿಸಿ & ಸಂರಚಿಸಿ ನಂತರ ಈ ಲೇಖನದಲ್ಲಿ ಮುಂದುವರೆಯಿರಿ.

ಗೂಗಲ್ ಇಂಡಿಕ್ ಕೀಬೋರ್ಡನ್ನು ಅನುಸ್ಥಾಪಿಸಿ ಸಂರಚಿಸಲು(ಕಾನ್ಫಿಗರ್ ಮಾಡಲು) ಇಲ್ಲಿ ಒತ್ತಿ.


ನಿಮ್ಮ ನಿಸ್ತಂತುವಿ(ಮೊಬೈಲ್)ನಲ್ಲಿ ಈಗಾಗಲೇ ಗೂಗಲ್ ಇಂಡಿಕ್ ಕೀಬೋರ್ಡನ್ನು ಅನುಸ್ಥಾಪಿಸಲ್ಪಟ್ಟಿದ್ದರೆ ಕೆಳಗಿನ ಹಂತಗಳನ್ನು ಅನುಸರಿಸಿ.


ಹಂತ ೧:

             ನೀವು ಗೂಗಲ್ ಇಂಡಿಕ್ ಕೀಬೋರ್ಡನ್ನು ಯಶಸ್ವಿಯಾಗಿ ಅನುಸ್ಥಾಪಿಸಿ ಸಂರಚಿಸಿದ ಮೇಲೆ ನಿಮ್ಮ ಬಳಿಯಿರುವ ಯಾವುದಾದರೊಂದು ಟೆಕ್ಸ್ಟ್ ಎಡಿಟರ್ ತೆರೆಯಿರಿ. ಈ ಲೇಖನದಲ್ಲಿ ಡಿಫಾಲ್ಟ್ ಎಸ್.ಎಂ.ಎಸ್ ತಂತ್ರಾಶದಲ್ಲಿ ಹೊಸ ಪಠ್ಯ ಸಂದೇಶವನ್ನು ಕನ್ನಡದಲ್ಲಿ ಬರೆಯುವಂತೆ ತೋರಿಸಲಾಗಿದೆ.
             ಟೆಕ್ಸ್ಟ್ ಎಡಿಟರನ್ನು ತೆರೆದಮೇಲೆ ಗೂಗಲ್ ಇಂಡಿಕ್ ಕೀಬೋರ್ಡ್ ತಾನಾಗಿಯೇ ತೋರಿಸಿಕೊಳ್ಳುತ್ತದೆ. ಇಲ್ಲಿ ನಿಮಗೆ ಸರಳವಾಗಬಲ್ಲ ಟೈಪಿಂಗ್ ವಿಧಾನವನ್ನು ಆರಿಸಿಕೊಳ್ಳಿ.


             ಮೊದಲ ವಿಧಾನದಲ್ಲಿ ನಿಮಗೆ ಆಂಗ್ಲದ ಅಕ್ಷರಗಳು ಗೋಚರಿಸುತ್ತವೆ. ಇಲ್ಲಿ ನಿಮಗೆ ಬೇಕಾದ ಕನ್ನಡದ ಶಬ್ಧವನ್ನು ಆಂಗ್ಲದ ಅಕ್ಷರಗಳನ್ನುಪಯೋಗಿಸಿ ಬರೆದಾಗ ಅದು ತಾನಾಗಿಯೇ ನಿಮಗೆ ಕನ್ನಡದ ಶಬ್ಧವನ್ನು ನೀಡುತ್ತದೆ. ಕೆಳಗೆ ನೀಡಿದ ಉದಾಹರಣೆಯನ್ನು ಗಮನಿಸಿ ಆಂಗ್ಲದ "NAMASKAARA"ಕ್ಕೆ ಕನ್ನಡದ "ನಮಸ್ಕಾರ" ಬಂದಿದೆ:


ಎರಡನೆಯ ವಿಧಾನದಲ್ಲಿ ನಿಮಗೆ ಕನ್ನಡದ ಅಕ್ಷರಗಳು ಗೋಚರಿಸುತ್ತವೆ. ಇಲ್ಲಿ ನಿಮಗೆ ಬೇಕಾದ ಕನ್ನಡದ ಶಬ್ಧವನ್ನು ನೇರವಾಗಿ ಕನ್ನಡದಲ್ಲಿಯೇ ಛಾಪಿಸಬಹುದು. ಇಲ್ಲಿ ನೀವು ಕನ್ನಡದ ಯಾವುದೇ ಅಕ್ಷರವನ್ನು ಒತ್ತಿದಾಗ ಅದರ ಎಲ್ಲ ಕಾಗುಣಿತಗಳು ಕಾಣಸಿಗುತ್ತವೆ. ಅವುಗಳಲ್ಲಿ ನಿಮಗೆ ಬೇಕಾದುದನ್ನು ಒತ್ತಬಹುದು:


ನಾನು ಮೊದಲ ವಿಧಾನದಲ್ಲಿ ಗೂಗಲ್ ಇಂಡಿಕ್ ಕೀಬೋರ್ಡನ್ನು ಬಳಸುವುದರಿಂದ ಮುಂದಿನ ಹಂತಗಳನ್ನು ಮೊದಲನೆಯ ವಿಧಾನಕ್ಕೆ ಅನುಗುಣವಾಗಿಯೇ ವಿವರಿಸಲಾಗಿದೆ.


ಹಂತ ೨:

             ನಿಮಗೆ ಬೇಕಾದ ಕನ್ನಡದ ಪದವನ್ನು ಆಂಗ್ಲದ ಅಕ್ಷರಗಳಿಂದ ಛಾಪಿಸಿ, ಆಗ ಗೂಗಲ್ ಇಂಡಿಕ್ ಕೀಬೋರ್ಡ್ ತಾನಾಗಿಯೇ ನಿಮಗೆ ಅದರ ಸಮನಾದ ಕನ್ನಡದ ಶಬ್ಧಗಳನ್ನು ಶಿಫಾರಸ್ಸು ಮಾಡುತ್ತದೆ. ಅವುಗಳಲ್ಲಿ ಸರಿಯಾದುದರ ಮೇಲೆ ಒತ್ತಿದಾಗ ಆ ಪದವು ನಿಮ್ಮ ಟೆಕ್ಸ್ಟ್ ಎಡಿಟರ್ನಲ್ಲಿ ಮೂಡುತ್ತದೆ. ಕೆಳಗಡೆಯ ಕೆಲ ಚಿತ್ರಗಳಲ್ಲಿ "ನಮಸ್ಕಾರ! ನನ್ನ ಹೆಸರು ನೆಲ್ಸನ್" ಎಂದು ಬರೆಯುತ್ತಿರುವುದನ್ನು ಗಮನಿಸಿ:




ಇಲ್ಲಿ ನನ್ನ ಹೆಸರನ್ನು ಕನ್ನಡದಲ್ಲಿ ಸರಿಯಾಗಿ ಬರೆಯಲು ನಾನು ಹೆಸರಿನ ಆಂಗ್ಲರೂಪ "Nelson" ಎಂದು ಬರೆದರೆ ಅದು ಕನ್ನಡದಲ್ಲಿ "ನೆಲ್ಸೊನ್" ಎಂದು ತಪ್ಪಾಗಿ ಮೂಡುತ್ತದೆ. ಆದ್ದರಿಂದ ಆಂಗ್ಲದ ಹೆಸರುಗಳನ್ನು ಕನ್ನಡದಲ್ಲಿ ಬರೆಯುವಾಗ ಅವುಗಳನ್ನು ನಾವು ಕನ್ನಡದಲ್ಲಿ ಉಚ್ಚರಿಸುವಂತೆಯೇ ಛಾಪಿಸಬೇಕು. ಇಲ್ಲಿ ನನ್ನ ಹೆಸರು ಕನ್ನಡದಲ್ಲಿ ಸರಿಯಾಗಿ ಮೂಡುವಂತೆ ಮಾಡಲು "Nelsan" ಎಂದು ಛಾಪಿಸಬೇಕು:



ಹಂತ ೩:

             ಇನ್ನು ಕನ್ನಡ ಹಾಗೂ ಆಂಗ್ಲ ಎರಡನ್ನೂ ಸೇರಿಸಿ ಒಂದೇ ವಾಕ್ಯದಲ್ಲಿ ಬರೆಯಬಹುದು. ಅದನ್ನು ಕೆಳಗಡೆಯ ಕೆಲ ಚಿತ್ರಗಳಲ್ಲಿ ವಿವರಿಸಿರುವುದನ್ನು ಗಮನಿಸಬಹುದು:





ಹಂತ ೪:

             ಎರೆಡೆರಡು ಭಾಷೆಗಳಲ್ಲಿ ಒಟ್ಟಿಗೆ ಬರೆಯುತ್ತಿರುವಾಗ ಗೂಗಲ್ ಇಂಡಿಕ್ ಕೀಬೋರ್ಡ್ ನಿಮಗೆ ಮುಂದಿನ ಪದದ ಬಗ್ಗೆ ಸಲಹೆ ನೀಡುತ್ತಿರುತ್ತದೆ. ಈ ಹಂತದಲ್ಲಿ ನೀವು ಭಾಷೆಯನ್ನು ಬದಲಾಯಿಸಲು "ಅಳಿಸು (ಬ್ಯಾಕ್ ಸ್ಪೇಸ್)" ಗುಂಡಿಯನ್ನು ಒತ್ತಬೇಕು. ಆಗ ನಿಮಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಗುಂಡಿಗಳು ಗೋಚರಿಸುತ್ತವೆ. ಅವುಗಳಲ್ಲಿ ನಿಮಗೆ ಬೇಕಾದ ಭಾಷಾಗುಂಡಿಯನ್ನು ಒತ್ತುವುದರ ಮೂಲಕ ಭಾಷೆಯನ್ನು ಆಯ್ಕೆಮಾಡಬಹುದು. ಹೀಗೆ ನೀವು ಒಂದೇ ವಾಕ್ಯವನ್ನು ಬರೆಯುವಾಗಲೂ ಸರಳವಾಗಿ ಬೇಕಾದಾಗ ಭಾಷೆಯನ್ನು ಬದಲಾಯಿಸಿ ಕನ್ನಡ ಹಾಗೂ ಆಂಗ್ಲದಲ್ಲಿ ಪದಗಳನ್ನು ಛಾಪಿಸಬಹುದು.





ಏನಾದರೂ ತೊಂದರೆಯಾಗಿದೆಯೇ? ನಮಗೆ ತಿಳಿಸಿ.




This post first appeared on ಹಳತು ಹೊನ್ನು, please read the originial post: here

Share the post

ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯ ಬಳಕೆ - Halatu Honnu

×

Subscribe to ಹಳತು ಹೊನ್ನು

Get updates delivered right to your inbox!

Thank you for your subscription

×